
ಬೆಳ್ತಂಗಡಿ; ಅರಸಿನಮಕ್ಕಿ ಹತ್ಯಡ್ಕ ಗ್ರಾಮದ ಹೊಸ್ತೋಟ ನಿವಾಸಿ ಖ್ಯಾತ ಯಕ್ಷಗಾನ ಕಲಾವಿದ ಅಂತರ ದಿನೇಶ್ ಭಟ್(77) ರವರು ಅಲ್ಪಕಾಲದ ಅಸೌಖ್ಯದಿಂದ ಮಾ.9 ರಂದು ನಿಧನರಾಗಿದ್ದಾರೆ. ಇವರು ಹೆಸರಾಂತ ಯಕ್ಷಗಾನ ಸ್ತ್ರೀ ವೇಷದ ಕಲಾವಿದರಾಗಿದ್ದರು ಆರ್.ಎಸ್.ಎಸ್. ನ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು ಬಿಜೆಪಿಯ ಗ್ರಾಮ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಮಗ ಪತ್ನಿ, 5 ಪುತ್ರಿಯರು, ಅಳಿಯಂದಿರು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.




