Home ಅಪರಾಧ ಲೋಕ ಬೆಳ್ತಂಗಡಿ;  ಅಕ್ರಮ ಗೋಹತ್ಯಾ ಪ್ರಕರಣ ದಾಖಲು. ಆರೋಪಿಯ ಮನೆ ಆವರಣ ಜಪ್ತಿ.

ಬೆಳ್ತಂಗಡಿ;  ಅಕ್ರಮ ಗೋಹತ್ಯಾ ಪ್ರಕರಣ ದಾಖಲು. ಆರೋಪಿಯ ಮನೆ ಆವರಣ ಜಪ್ತಿ.

0
3

ದಿನಾಂಕ: 26.02.2026 ರಂದು ರಾತ್ರಿ, ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮ, ಹೊಸವಕ್ಲು ಎಂಬಲ್ಲಿ, ಮನೆಯೊಂದರ ಆವರಣದಲ್ಲಿ, ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್ಐ ಸುತೇಶ್‌ ಕೆ ಪಿ ರವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳದಲ್ಲಿದ್ದ ಹೆಚ್‌ ಅಬ್ದುಲ್‌ ರಹಿಮಾನ್‌ ಎಂಬವರ ಮನೆಯ ಬಳಿ ತಲುಪಿದಾಗ, ಮನೆಯ ಆವರಣದಿಂದ ಇಬ್ಬರು ವ್ಯಕ್ತಿಗಳು ಓಡಿಹೋಗಿರುತ್ತಾರೆ. ಸದ್ರಿ ಸ್ಥಳವನ್ನು ಪರಿಶೀಲಿಸಿದಾಗ, ಗೋಮಾಂಸವನ್ನು ಪ್ಯಾಕೆಟ್ ಮಾಡಿಡಲಾಗಿದ್ದು, ಸಮೀಪದಲ್ಲಿದ್ದ ಆಟೋ ರಿಕ್ಷಾದಲ್ಲಿಯೂ ಗೋಮಾಂಸದ ಪ್ಯಾಕೆಟ್ ಗಳು ಪತ್ತೆಯಾಗಿದ್ದು ಒಟ್ಟು 56 ಕೆಜಿ ಮಾಂಸ ಪತ್ತೆಯಾಗಿರುತ್ತದೆ. ಮುಂದಿನ ಕಾನೂನುಕ್ರಮಕ್ಕಾಗಿ ಸ್ಥಳದಲ್ಲಿದ್ದ ಗೋಮಾಂಸ, ತೂಕದ ಯಂತ್ರ, ಅಟೋರಿಕ್ಷಾ, ಮೊಬೈಲ್ ಹಾಗು ಇತರೆ ಸೊತ್ತುಗಳನ್ನು ವಶಕ್ಕೆ ಪಡೆದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 27/2026, ಕಲಂ: 4, ಮತ್ತು 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ:3(5)) BNS 2023
ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡು, ಪ್ರಕರಣದ ಆರೋಪಿ ಹೆಚ್‌ ಅಬ್ದುಲ್‌ ರಹಿಮಾನ್‌ ಎಂಬವರು ಜಾನುವಾರುಗಳ ವಧೆಗಾಗಿ ಬಳಸಿದ್ದ ಮನೆಯ ಆವರಣವನ್ನು ಜಪ್ತಿ ಮಾಡಲಾಗಿರುತ್ತದೆ.

NO COMMENTS

LEAVE A REPLY

Please enter your comment!
Please enter your name here