
ಬೆಳ್ತಂಗಡಿ : ಅನಧಿಕೃತವಾಗಿ ಯಾವುದೇ ಸರಕಾರದ ಅನುಮತಿ ಪಡೆಯದೆ ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಮೂರು ಕಟ್ಟಡ ಕಾಮಗಾರಿಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ತಡೆ ನೀಡಿದೆ.
ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಹಳೆಕೋಟೆ ಸಾಯಿ ಮಂದಿರದ ಎದರುಭಾಗದಲ್ಲಿ ವಲೇರಿಯನ್ ಪಾಯಸ್ ಮಾಲೀಕತ್ವದ ಕಟ್ಟಡ ಕಾಮಗಾರಿ, ಹಳೆಕೋಟೆ ಪೆಟ್ರೋಲ್ ಪಂಪ್ ಬಳಿಯ ಎವರೆಸ್ಟ್ ಡಾಯಸ್ ಮಾಲೀಕತ್ವದ ಕಟ್ಟಡ ಕಾಮಗಾರಿ, ಹಳೆಕೋಟೆ ಪೆಟ್ರೋಲ್ ಪಂಪ್ ಬಳಿಯ ಗಣೇಶ್ ಮಲ್ಯ ಮಾಲೀಕತ್ವದ ಕಟ್ಟಡಗಳಿಗೆ ಸರಕಾರದ ಯಾವುದೇ ಅನುಮತಿ ಪಡೆಯದೆ ಅನಧಿಕೃತ ಕಾಮಗಾರಿ ಕೆಲಸ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ನಗರ ಪಂಚಾಯತ್ ಜ.28 ರಂದು ಮೂರು ಕಟ್ಟಡದ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಕೆಲಸ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
ಈ ನೋಟಿಸ್ ಗೆ ತಪ್ಪಿದಲ್ಲಿ ಪುರಸಭಾ ಅಧಿನಿಯಮದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಲಾಗಿದೆ.









