

ಬೆಳ್ತಂಗಡಿ; ನಗರದ ಮುಗುಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸ್ ವಸತಿನಿಲಯದ ಬಳಿಯಿರುವ ಅಡಿಕೆ ತೋಟ ದಲ್ಲಿ
ಬಳಿಯಲ್ಲಿ ಶನಿವಾರ ಬೆಳಿಗ್ಗೆ 6-00 ಗಂಟೆಗೆ
ಚಿರತೆಯೊಂದು ಪತ್ತೆಯಾಗಿದೆ.
ಬೆಳಿಗ್ಗೆ ವಸತಿ ನಿಲಯದ ಮಕ್ಕಳು ಬಟ್ಟೆ ತೋಳೆಯಲು ಹೊರಗೆ ಬಂದಾಗ ನಿಲಯಕ್ಕೆ ತಾಗಿಕೊಂಡು ಪಕ್ಕದಲ್ಲಿರುವ ಅಡಿಕೆ ತೋಟದ ಬದಿಯಲ್ಲೇ ಇದ್ದ ಚಿರತೆಯೊಂದನ್ನು ನೋಡಿದ
ಶಾಲಾ ಮಕ್ಕಳು ಹೆದರಿ ನಿಲಯದ ಒಳಗೆ ಓಡಿ ಹೋಗಿ ಬಾಗಿಲು ಹಾಕಿ ಅವಿತು ಕೊಂಡು ನಿಲಯ ಸಿಬ್ಬಂದಿಗೆ ಮತ್ತು ಸ್ಥಳೀಯರಿಗೆ ಮಾಹಿತಿಯನ್ನು ನೀಡಿದ್ದಾರೆ.
ಅಲ್ಲದೇ ಅದೇ ಪರಿಸರದ ಪಕ್ಕದ ಕೆಲ್ಲಗುತ್ತು ಜಂಕ್ಷನ್ ಬಳಿಯಲ್ಲಿ ಮಹಿಳೆಯೊಬ್ಬರು ಬೆಳಿಗ್ಗೆ 7-15 ರ ಸಮಯದಲ್ಲಿ ಫ್ಯಾಕ್ಟರಿ ಕೆಲಸಕ್ಕೆಂದು ಹೋಗುತ್ತಿರುವ ಸಮಯದಲ್ಲಿ ಚಿರತೆಯೊಂದು ರಸ್ತೆ ಬದಿಯಲ್ಲಿ ಜೋರಾಗಿ ಘರ್ಜನೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ ಚಿರತೆ ಬರುತ್ತಿರುವ ಸೂಚನೆ ಅರಿತ ಮಹಿಳೆ ಭಯಭೀತರಾಗಿ ಬೆಳ್ತಂಗಡಿ ಪೇಟೆಕಡೆಗೆ ಓಡಿಕೊಂಡು ಹೋಗಿ ಸ್ಥಳೀಯರಿಗೆ ಮಾಹಿತಿಯನ್ನು ನೀಡಿದ್ದಾರೆ.

ಪ್ರತ್ಯಕ್ಷದರ್ಶಿಗಳು
ಸ್ಥಳೀಯರು ಮಾಹಿತಿಯನ್ನು ಪಡಕೊಂಡ ಬಿ.ಕೆ.ವಸಂತ್ ರವರು ಸ್ತಳಿಯರಿಗೆ ಶಾಲಾ ಮಕ್ಕಳಿಗೆ ಈ ಮಾಹಿತಿಯನ್ನು ತಿಳಿಸಿ ಎಚ್ಚರಿಕೆ ನೀಡಿದರು. ಅರಣ್ಯ ಇಲಾಖೆಯ
ಅಧಿಕಾರಿ ಆರ್.ಎಫ್.ಒ ತ್ಯಾಗರಾಜ್
ರವರಿಗೆ ಮಾಹಿತಿಯನ್ನು ನೀಡಿದ್ದು ಅವರ ಮಾರ್ಗದರ್ಶನದಲ್ಲಿ
ಅರಣ್ಯ ಅಧಿಕಾರಿಗಳಾದ ಕಿರಣ್ ಪಾಟೀಲ್ ,ಪರಶಿವ ಮೂರ್ತಿ, ಸ್ಥಳೀಯ ಮುಖಂಡರಾದ
ಬಿ.ಕೆ ವಸಂತ್,
ಸನತ್ ಕುಮಾರ್ ಜೈನ್, ಜಯಕುಮಾರ್,ಹರೀಶ್ ಜೈನ್ , ಹರೀಶ್ ಆಟೋ ಕೆಲ್ಲಗುತ್ತು,
ಮತ್ತಿತರರು ಮುಗುಳಿ ಕೆಲ್ಲಗುತ್ತು ,ಪ್ರದೇಶದಲ್ಲಿ
ಚಿರತೆ ಬಂದಿರುವ ಬಗ್ಗೆ ಅದರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿ ಪರಿಶೀಲನೆ ಮಾಡಿಲು ಅರಣ್ಯ ಇಲಾಖೆಗೆ ಅಹಕರಿಸಿದರು.
ಈದಿನ ಸಂಜೆ ಚಿರತೆ ಬರುವ ನಿಗದಿತ ಸ್ಥಳವೊಂದನ್ನು ಗುರುತಿಸಿ ಆ ಪ್ರದೇಶದಲ್ಲಿ
ಚಿರತೆ ಹಿಡಿಯಲು ಬೋನಿ (ಗೂಡು)ನ ವ್ಯವಸ್ಥೆ ಮಾಡುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.






