

ಬೆಳ್ತಂಗಡಿ : ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿರುವ ಆರೋಪದ ಮೇರೆಗೆ ಸಾರ್ವಜನಿಕರು ಸೇರಿ ಇಬ್ಬರು ಆರೋಪಿಗಳನ್ನು ಓಡಿ ಹಿಡಿದುಕೊಂಡು ಬಂದು ಹಿಗ್ಗಮುಗ್ಗ ಥಳಿಸಿ ಬಳಿಕ ಮರಕ್ಕೆ ಕಟ್ಟಿ ಹಾಕಿ ವೇಣೂರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಈ ಬಗ್ಗೆ ಇಬ್ಬರು ಬೈಕ್ ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಇದೆ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದವರು ನೀಡಿದ ದೂರಿನಂತೆ ಸ್ಥಳೀಯರಾದ 8 ಮಂದಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎರಡೂ ಪ್ರಕರಣಗಳಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ವರದಿ: ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಜ.20 ರಂದು ಬೆಳಗ್ಗಿನ ಜಾವ 2:10 ಗಂಟೆಯಿಂದ 2.30 ಗಂಟೆಯ ಮದ್ಯೆ ಅವಧಿಯಲ್ಲಿ ಮಂಗಳೂರು ನಗರದ ಕುಳೂರು ನಿವಾಸಿಗಳಾದ ಮೋಯಿದ್ದಿನ್ ನಾಸೀರ್ ಹಾಗೂ ಅಬ್ದುಲ್ ಸಮದ್ ಎಂಬವರುಗಳು ನಾಯಿಗೆ ಬೈಯ್ಯುತ್ತಿದ್ದ ಬಗ್ಗೆ ದೇವಿಪ್ರಸಾದ್ ಅವರ ನೆರೆ ಮನೆಯ ಜಯ ಪೂಜಾರಿಯವರ ಹೆಂಡತಿ ಜಯ ಪೂಜಾರಿಯವರಿಗೆ ಪೋನು ಮಾಡಿ ತಿಳಿಸಿದಾಗ ನೇಮೋತ್ಸವ ಕಾರ್ಯಕ್ರಮದಲ್ಲಿದ್ದ ದೇವಿಪ್ರಸಾದ್ ಮತ್ತು ಇತರರು ಮನೆಯ ಬಳಿ ಬಂದಾಗ ಆರೋಪಿತರುಗಳು ದೇವಿಪ್ರಸಾದ್ ರವರ ನಂಬರ್ KA-19-W-407 ಬೈಕ್ ಕಳವು ಮಾಡಿಕೊಂಡು ಹೋಗುವುದನ್ನು ಕಂಡು ಬೆನ್ನಟ್ಟಿ ತಡೆದು ನಿಲ್ಲಿಸಿದ ಸಮಯ ಆರೋಪಿಗಳು ಹಲ್ಲೆ ನಡೆಸಿ ಕೈಯಿಂದ ತಳ್ಳಿ ಕಳ್ಳತನದ ನಂತರ ತಪ್ಪಿಸಿಕೊಳ್ಳಲು ಬೈಕ್ ನೊಂದಿಗೆ ಓಡಲು ಯತ್ನಿಸಿದವರನ್ನು ವಿಚಾರ ತಿಳಿದು ಸುಮಾರು 25-30 ಜನರ ಗುಂಪು ಆರೋಪಿಗಳನ್ನು ಹಿಡಿದು ಮರಕ್ಕೆ ಕಟ್ಟಿಹಾಕಲಾಗಿತ್ತು. ಬಳಿಕ ಆರೋಪಿಗಳು ಬೈಕ್ ಕಳವು ಮಾಡಿ ಬೈಕ್ ನೊಂದಿಗೆ ತಪ್ಪಿಸಿಕೊಳ್ಳಲು ಹಲ್ಲೆಗೆ ಮುಂದಾಗಿದ್ದರು ಎಂದು ದೇವಿಪ್ರಸಾದ್ ಎಂಬವರು ನೀಡಿದ ದೂರಿನ ಮೇರೆಗೆ ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಸಮದ್ ಮತ್ತು ಮೊಯಿದ್ದಿನ್ ನಾಸಿರ್ ವಿರುದ್ಧ Us 303(2), 307 BNS -2023 ಯಂತೆ ಪ್ರಕರಣ ದಾಖಲಾಗಿದೆ.
ಮಂಗಳೂರು ಬೆಂಗ್ರೆ ಕೂಳೂರು ನಿವಾಸಿಗಳಾದ ಅಬ್ದುಲ್ ಸಮದ್ ಗೆಳೆಯ ಮೊಯ್ದಿನ್ ನಾಸಿರ್ ಎಂಬವರರೊಂದಿಗೆ ಮರೋಡಿಯಲ್ಲಿರುವ ನಾಸಿರ್ ನ ಸಂಬಂಧಿಕರ ಮನೆಗೆ ಬಂದಿದ್ದು ತಡ ರಾತ್ರಿ 2.30 ಗಂಟೆಯ ಸುಮಾರಿಗೆ ಸಂಬಂಧಿಕರ ಮನೆಹುಡುಕುತ್ತಾ ಹೋಗಿದ್ದು ಕುಡಿದ ಮತ್ತಿನಲ್ಲಿ ದಾರಿ ತಪ್ಪಿದೆ ಇದಾದ ಬಳಿಕ ಪಳಾರಗೋಳಿ ಎಂಬಲ್ಲಿ ಮನೆಯ ಬಳಿ ನಿಲ್ಲಿಸಿದ್ದ ಬೈಕ್ ಅನ್ನು ತೆಗೆದುಕೊಂಡು ಹೋಗುವ ಸಮಯ ಸುಮಾರು 25 ರಿಂದ 30ಮಂದಿಯ ತಂಡ ತಡೆದು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿ ಮರಕ್ಕೆ ಕಟ್ಟಿಹಾಕಿದ್ದಾರೆ ತೀವ್ರವಾಗಿ ನಿಂದಿಸಿ ನೀವು ಕಳ್ಳರು ಕೈಕಾಲು ಮುರಿಯಬೇಕು ಎಂದು ಕೊಲಿನಿಂದ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿದ್ದಾರೆ ಹಾಗು ಇನ್ನು ಮುಂದೆ ಈ ಊರಿನಲ್ಲಿ ಕಂಡು ಬಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದು ಬಾಚು, ನಿತಿನ್, ನರೇಶ್ ಅಂಚನ್, ರತ್ನಾಕರ, ಸಾತ್ವಿಕ್, ದೇವಿಪ್ರಸಾದ್, ಸುಧೀರ್, ಚಂದಪ್ಪ ಹಾಗು ಇತರರ ವಿರುದ್ದ ಪ್ರಕರಣ ದಾಖಲಿಸಲಾಗಿದೆ









