
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ಕಾರ್ಯಾಚರಣೆ ವೇಳೆ ಬಂಗ್ಲೆಗುಡ್ಡೆಯಲ್ಲಿ ವಿಠಲ ಗೌಡ ನೀಡಿದ ಮಾಹಿತಿಯಂತೆ ಹುಡುಕಾಟ ನಡೆಸಿದಾಗ ಸಿಕ್ಕ ಏಳು ಮಾನವನ ಅಸ್ಥಿಪಂಜರಗಳನ್ನು ಬೆಂಗಳೂರು ಎಫ್.ಎಸ್.ಎಲ್ ಗೆ ರವಾನೆ ಮಾಡಲಾಗಿರುವುದಾಗಿ ತಿಳಿದು ಬಂದಿದೆ.
ಬೆಳ್ತಂಗಡಿ ಎಸ್ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಸೆ.17 ರಂದು ಐದು ಅಸ್ಥಿಪಂಜರ ಮತ್ತು ಸೆ.18 ರಂದು ಎರಡು ಅಸ್ಥಿಪಂಜರ ಸೇರಿ ಒಟ್ಟು ಏಳು ಅಸ್ಥಿಪಂಜರಗಳನ್ನು ವಶಪಡಿಸಿಕೊಡಿದ್ದರು. ಇದೀಗ ಜ.20 ರಂದು ಬೆಳಗ್ಗೆ ಬೆಳ್ತಂಗಡಿ ಎಸ್ಐಟಿ ಕಚೇರಿಯಿಂದ ಹೆಚ್ಚಿನ ತನಿಖೆಗಾಗಿ ಬೆಂಗಳೂರಿನಲ್ಲಿರುವ ಎಫ್.ಎಸ್.ಎಲ್ ಕಚೇರಿಗೆ ಅಸ್ತಿಪಂಜರಗಳನ್ನು ರವಾನೆ ಮಾಡಲಾಗಿರುವುದಾಗಿ ತಿಳಿದು ಬಂದಿದೆ.








