Home ಸ್ಥಳೀಯ ಸಮಾಚಾರ ನೆರಿಯ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ನೀಲಯ್ಯ ಮಲೆಕುಡಿಯ ನಿಧನ

ನೆರಿಯ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ನೀಲಯ್ಯ ಮಲೆಕುಡಿಯ ನಿಧನ

0
3

ಬೆಳ್ತಂಗಡಿ;  ತಾಲೂಕಿನ ನೆರಿಯ ಗ್ರಾಮದ ಆಲಂಗಾಯಿ ನಿವಾಸಿ , ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ನೀಲಯ್ಯ ಮಲೆಕುಡಿಯ (70) ಜ 19 ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಸಣ್ಣ ಪ್ರಾಯದಲ್ಲೇ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮೈಗೂಡಿಸಿಕೊಂಡು , ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿದ್ದ ಅವರು ನೆರಿಯ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾಗಿ , ಕರ್ನಾಟಕ ಸರ್ಕಾರದ ಭೂ ನ್ಯಾಯ ಮಂಡಳಿ ಮಾಜಿ ಸದಸ್ಯರಾಗಿ , ಮಲೆಕುಡಿಯ ಸಮುದಾಯದ ಹಿರಿಯ ಸದಸ್ಯರಾಗಿ , ಕೊಯ್ಯುರು ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿಚಾರಕರಾಗಿ ಸೇವೆ ಸಲ್ಲಿಸಿದ್ದಾರೆ.

ಮೃತರು ಪತ್ನಿ ಕಲ್ಯಾಣಿ , ಪುತ್ರರಾದ ಲೀಲಾಧರ , ರಾಘವೇಂದ್ರ , ಸೊಸೆಯಂದಿರು , ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ನೀಲಯ್ಯ ಮಲೆಕುಡಿಯರ ನಿಧನಕ್ಕೆ  , ಮೆಸ್ಕಾಂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ , ಮಾಜಿ ಸಚಿವ ಗಂಗಾಧರ ಗೌಡ ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ನಾಗೇಶ್ ಗೌಡ , ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫರ್ನಾಂಡೀಸ್ ಹಳ್ಳಿಮನೆ , ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಜಯಾನಂದ ಪಿಲಿಕಲ ಸಂತಾಪ ಸೂಚಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here