
ಧರ್ಮಸ್ಥಳ; ಮೂಡಂಗಲ್ ಫ್ರೆಡ್ಸ್ ಧರ್ಮಸ್ಥಳ ಇದರ ನೇತೃತ್ವದಲ್ಲಿ ಬ್ಲಾಕ್ ಬಸ್ಟರ್ ಕಪ್ ಆರುತಂಡಗಳ ವಾಲಿಬಾಲ್ ಪಂದ್ಯಾಟ ಧರ್ಮಸ್ಥಳ ಸೈಂಟ್ ಜೋಸೆಫ್ ಚರ್ಚ್ ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ಯುವ ಕಾಂಗ್ರೆಸ್ ನ ಮುಖಂಡ ಅಭಿನಂದನ್ ಹರೀಶ್ ಕುಮಾರ್ ನೆರವೇರಿಸಿ ಮಾತನಾಡಿ ಕ್ರೀಡೆ ಎಲ್ಲರನ್ನೂ ಒಟ್ಟುಸೇರಿಸುವ ಶಕ್ತಿಯಿದೆ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರಕಲು ಸಾಧ್ಯವಿದೆ ಎಂದರು.

ಮುಖ್ಯ ಅತಿಧಿಗಳಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ಕೇಶವ ಗೌಡ ಮಾತನಾಡಿ ಗೆದ್ದವರು ಹಿಗ್ಗದೆ ಸೋತವರು ಕುಗ್ಗದೆ ಎಲ್ಲರೂ ಸೇರಿ ಕ್ರೀಡಾಕೂಟವನ್ನು ಯಶಸ್ವಿ ಗೊಳಿಸೋಣ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ.ವಿ ದೇವಸ್ಯ ಮಾತನಾಡಿ ಶುಭ ಹಾರೈಸಿದರು, ಹರ್ಷಿತ್ ಮುರಳೀಧರ, ಹರೀಶ್ ಸುವರ್ಣ, ಅಬ್ರಹಾಂ ಜೇಮ್ಸ್, ಅರುಣ್ ಮತ್ತಿಲ, ಉಮೇಶ್ ಪ್ರಭು, ಅಖಿಲ್ ಶೆಟ್ಟಿ, ಹಾಗೂ ಎಲ್ಲ ತಂಡಗಳ ಮಾಲಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ವಾಲಿಬಾಲ್ ಆಟಗಾರ ಥೋಮಸ್ ಅವರನ್ನು ಮೂಡಂಗಲ್ ಫ್ರಡ್ಸ್ ವತಿಯಿಂದ ಸನ್ಮಾನಿಸಲಾಯಿತು








