Home ಸ್ಥಳೀಯ ಸಮಾಚಾರ ನವೀಕೃತ ಉಜಿರೆ ಸಂತ ಅಂತೋನಿ ಚರ್ಚ್ ಉದ್ಘಾಟನೆ ಆಶೀರ್ವಾಚನ

ನವೀಕೃತ ಉಜಿರೆ ಸಂತ ಅಂತೋನಿ ಚರ್ಚ್ ಉದ್ಘಾಟನೆ ಆಶೀರ್ವಾಚನ

19
0


ಉಜಿರೆ: ಪವಾಡ ಪುರಷರೆಂದು ಹೆಸರುವಾಸಿಯಾದ ಪಾದುವಾದ ಸಂತ ಅಂತೋನಿಯವರ ಹೆಸರಿಗೆ ಸಮರ್ಪಿಸಲ್ಪಟ್ಟ ಉಜಿರೆಯ ಕ್ರೈಸ್ತ ದೇವಾಲಯವು ದುರಸ್ತಿ ಹಾಗೂ ನವೀಕರಣಗೊಂಡು ಆಶೀರ್ವಚನ ಕಾರ್ಯಕ್ರಮವು
ಡಿ. 22ರಂದು ನಡೆಯಿತು. ರೈ.ರೆ.ಡಾ.ಪೀಟರ್ ಪೌಲ್ ಸಲ್ದಾನ್ಹಾರವರು ಮುಖ್ಯ ರಸ್ತೆಯ ಬಳಿ ನಿರ್ಮಿಸಿದ ಸಂತ ಅಂತೋನಿಯವರ ಗ್ರೋಟ್ಟೋ ಆಶೀರ್ವಚನ, ನಂತರ ಮುಖ್ಯ ದ್ವಾರದ ಉದ್ಘಾಟನೆ, ವೆಲಂಕಣಿ ಮಾತೆಯ ಗ್ರೋಟ್ಟೋ, ಬಳಿಕ ಚರ್ಚ್ ಶುದ್ಧಿಕರಣ, ದಿವ್ಯ ಬಲಿಪೂಜೆಯನ್ನು ಅರ್ಪಿಸಿ ಪವಿತ್ರ ಪರಮ ಪ್ರಸಾದ ಮಂಟಪ್ಪ ಉದ್ಘಾಟಿಸಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಬಲಿಪೂಜೆಯಲ್ಲಿ ಧರ್ಮಾಧ್ಯಕ್ಷರೊಂದಿಗೆ, ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರು ಅ. ವಂ. ವಾಲ್ಟರ್ ಡಿಮೆಲ್ಲೊರವರು, ಉಜಿರೆ ಧರ್ಮಕೇಂದ್ರದ ಧರ್ಮಗುರು ವಂ. ಆಬೆಲ್ ಲೋಬೋ, ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ. ವಿಜಯ್ ಲೋಬೊ ಹಾಗೂ ವಲಯದ ಮತ್ತು ಇದೆ ಚರ್ಚ್ ನಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳು ಹಾಗೂ ಇನ್ನಿತರ ಗುರುಗಳು, ಧರ್ಮ ಭಗೀನಿಯರು, ಕ್ರೈಸ್ತ ಭಾಂದವರು ಭಾಗವಹಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷ ಅಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಆರ್ಥಿಕ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಮಾತನಾಡಿ ಇಲ್ಲಿಯ ಧರ್ಮ ಗುರುಗಳು, ಆಡಳಿತ ಮಂಡಳಿ ಎಲ್ಲ ಜನರ ಸೇವೆಯ ಫಲವಾಗಿ, ಶ್ರಮದ ಫಲವಾಗಿ, ಉಧಾರ ದಾನಿಗಳ ಫಲವಾಗಿ ಸಂತ ಅಂತೋನಿಯವರ ಚರ್ಚ್ ನಾವಿಕರಣಗೊಂಡಿದೆ. ಎಲ್ಲ ರೀತಿಯ ಸಹಾಯ ಮಾಡಿದ ನೇತೃತ್ವತೆಗೆದುಕೊಂಡು ಕೆಲಸ ಮಾಡಿದವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ದೇವರ ಆಶೀರ್ವಾದ ಬೇಡುತ್ತೇನೆ ಎಂದರು.

ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೇಟನ್ನಾಯ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಉಷಾ ಕಿರಣ್ ಕಾರಂತ್, ಉಜಿರೆ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಜನಾಬ್ ಅಬೂಬಕ್ಕರ್ ಯು.ಹೆಚ್. ರವರು ಅತಿಥಿಗಳಾಗಿ ಭಾಗವಹಿಸಿದ್ದರುಪಾಲನ ಮಂಡಳಿ ಉಪಾಧ್ಯಕ್ಷ ಅಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಆಯೋಗ ಸಂಯೋಜಕಿ ಲವೀನಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.


ಈ ಸಭಾ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ದಾನ ನೀಡಿದ ದಾನಿಗಳಿಗೆ, ಇಂಜಿನಿಯರ್ ಅಜಯ್ ಡಿಕುನ್ಹ,ಗುತ್ತಿಗೆದಾರ ಅನಿಲ್ ಡಿಸೋಜ, ಉಪಾಧ್ಯಕ್ಷ ಅಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಆಯೋಗದ ಸಂಯೋಜಕರು ಲವೀನಾ ಫೆರ್ನಾಂಡಿಸ್,ಆರ್ಥಿಕ ಸಮಿತಿ ಸದಸ್ಯ ಪ್ರವೀಣ್ ವಿಜಯ್ ಡಿಸೋಜ, ಅರುಣ್ ಸಂದೇಶ್ ಡಿಸೋಜ, ಕಾರ್ಮಿಕ ವರ್ಗದವರನ್ನು ಗೌರವಿ ಸನ್ಮಾನಿಸಲಾಯಿತು. ಚರ್ಚ್ ಪ್ರಧಾನ ಧರ್ಮ ಗುರು ವಂ. ಅಬೆಲ್ ಲೋಬೊ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರುವಿಶಾಲ್ ಪಿಂಟೊ ಕಾರ್ಯಕ್ರಮ ನಿರೂಪಿಸಿ, ಪಾಲನ ಮಂಡಳಿ ಕಾರ್ಯದರ್ಶಿ ಲಿಗೋರಿ ವಾಸ್ ವಂದಿಸಿದರು.

ಉಜಿರೆ ಸಂತ ಅಂತೋನಿ ಚರ್ಚ್ ನವೀಕರಣಗೊಂಡು ಉದ್ಘಾಟನೆಗೊಂಡಿದೆ. ಮೊದಲ ಚರ್ಚ್ ನೋಡಿದ್ದೇನೆ, ಈಗಲೂ ಹೊಸ ರೂಪ ಬಂದಿದೆ. ಈ ಭಾಗದ ಅನೇಕ ಕ್ರೈಸ್ತ ಭಾಂದವರು ಬಂದು ಶಾಲಾ ಗ್ರೌಂವ್ಡ್ ನ ಒಳ ಚರಂಡಿ ನಿರ್ಮಿಸಲು ಅನುದಾನ ಕೇಳುವಾಗ ಸುಮಾರು 14ಲಕ್ಷ ಮತ್ತು ಚರ್ಚ್ ವಠಾರಕ್ಕೆ ಇಂಟರ್ ಲಾಕ್ ಅಳವಡಿಕೆಗೆ 10ಲಕ್ಷ ಒದಗಿಸಿದ್ದೇನೆ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದಲ್ಲಿ ಅನುದಾನ ಒದಗಿಸಲಾಗುವುದು.ಈ ರೀತಿ ಆರಾಧನ ಕ್ಷೇತ್ರದಲ್ಲಿ ಸೇವೆ ಮಾಡುವ ಭಾಗ್ಯ ನನಗೆ ದೊರೆತಿದೆ. ಚರ್ಚ್ ಅದಿನದಲ್ಲಿರುವ ಶಿಕ್ಷಣ ಸಂಸ್ಥೆ ಅತ್ಯಂತ ಶ್ರೇಷ್ಠ ಶಿಕ್ಷಣ ನೀಡುವಂತಹ ಶಿಕ್ಷಣ ಸಂಸ್ಥೆಯಾಗಿದೆ. ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಶಿಕ್ಷಣ ಸಂಸ್ಥೆ ಇಲ್ಲಿ ಕಾರ್ಯಾಚರಿಸುತ್ತಿದೆ.

ಹರೀಶ್ ಪೂಂಜ
ಶಾಸಕರು

ಇಲ್ಲಿಯ ಧಾರ್ಮಿಕ ಶ್ರದ್ದೆ ಬಗ್ಗೆ ನನಗೆ ಅಪಾರ ಗೌರವ. ನಾನು ಒಬ್ಬ ಸಂತ ಅಂತೋನಿ ಚರ್ಚ್ ನಿಂದ ನಡೆಸಲ್ಪಡುವ ಅನುಗ್ರಹ ಶಾಲಾ ಹಳೇವಿದ್ಯಾರ್ಥಿ. ಈ ಶಾಲೆಯಿಂದ ಹೊರ ಬಂದ 3ನೇ ಬ್ಯಾಚ್. ಆ ಸಂದರ್ಭದಲ್ಲಿ ಶಾಲೆಯ ಕಟ್ಟಡ ಇರಲಿಲ್ಲ. ಶಾಲೆಯ ತರಗತಿಗಳು ಚರ್ಚ್ ಹಾಲ್ ನಲ್ಲಿ ನಡೆಯುತ್ತಿದ್ದವು. ಆ ವಯಸಿನಲ್ಲಿಯೇ ಚರ್ಚ್ ನ ಎಲ್ಲ ಚಟುವಟಿಕೆಗಳು ನಾನು ಬಲ್ಲೆ. ಚರ್ಚ್ ಮತ್ತು ನನ್ನ ವೈಯುಕ್ತಿಕ ಅನನ್ಯವಾದ ಸಂಬಂಧ ಇದೆ. ಕ್ರೈಸ್ತ ಸಮಾಜದ ಬಗ್ಗೆ ಹೇಳಬೇಕಾದರೆ ಅವಿಭಾಜೀತ ದ. ಕ. ಮತ್ತು ಉಡುಪಿ ಜಿಲ್ಲೆ ಯಲ್ಲಿ ದೇಶದ ಶೈಕ್ಷಣಿಕ ಕೇಂದ್ರ ಬಹಳ ಮುಂಚೂಣಿ ಯಲ್ಲಿದೆ. ಶೈಕ್ಷಣಿಕ ಕೇಂದ್ರ ಮಾಡುವಲ್ಲಿ ಕ್ರೈಸ್ತರ ಪಾತ್ರ ಮಹತ್ವದ್ದಾಗಿದೆ. ಕೇವಲ ಕ್ರೈಸ್ತ ಸಮಾಜ ಮಾತ್ರ ಭಾವನೆ ಇಟ್ಟುಕೊಳ್ಳದೆ ವಿಶಾಲವಾಗಿ ಯೋಚಿಸಿ ಕೇವಲ ಕ್ರೈಸ್ತ ಸಮಾಜ ಮಾತ್ರವಲ್ಲ ಇಡೀ ಸಮಾಜಕ್ಕೆ ವಿದ್ಯೆ ಬರಬೇಕು ಎಂದು ದೊಡ್ಡ ಚಿಂತನೆಯನ್ನು ಮಾಡಿ ನಮ್ಮ ಜಿಲ್ಲೆಯದ್ಯಾoತ ದೊಡ್ಡ ಶಿಕ್ಷಣ ಸಂಸ್ಥೆ ಯನ್ನು ಮಾಡಿದೆ ಆದರೆ ಅದು ಕ್ರೈಸ್ತ ಸಮಾಜ. ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಕ್ರೈಸ್ತ ಸಮಾಜಕ್ಕೆ. ಕಾಕತಾಲಿಯಂತೆ ಸಂತ ಅಂತೋನಿ ಚರ್ಚ್ ನ ಗೋಪುರ ನಿರ್ಮಾಣವಾಗಿ ಉದ್ಘಾಟನೆಯಾಗಿದೆ ನಮ್ಮ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಜ ಗೋಪುರವು ನಿರ್ಮಾಣ ಕಾರ್ಯ ನಡೆಯುತ್ತಿದೆ.ಇದು ದೇವರು ಮಾಡಿರುವಂತಹ ವ್ಯವಸ್ಥೆ. ರಾಜ ಗೋಪುರಕ್ಕೆ ಅನೇಕ ಕ್ರೈಸ್ತ ಕುಟುಂಬ ಗಳು ಆರ್ಥಿಕ ನೆರವು ನೀಡಿದ್ದಾರೆ. ಕ್ರೈಸ್ತ ಸಮಾಜ ಇಡೀ ಸಮಾಜದೊಂದಿಗೆ ಬೆರೆತುಕೊಂಡು ಒಂದು ವಿಶೇಷ ರೀತಿಯ ಸಂದೇಶ ವನ್ನು ಜಗತ್ತಿಗೆ ಕೊಟ್ಟಿದೆ. ಇವತ್ತು ಈ ಗೋಪುರ ನಿರ್ಮಾಣವಾಗಿದೆ ನಮ್ಮ ಬಾಂದವ್ಯ ಇನ್ನಷ್ಟು ಗಟ್ಟಿಯಾಗಲಿ.ಸಾರುತ್ತಿದೆ.

ಶರತ್ ಕೃಷ್ಣ ಪದ್ವೆಟ್ಟುನ್ನಾಯ
ಅನುವಂಶಿಯ ಆಡಳಿತ ಮೊಕ್ತೇಸರರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ

LEAVE A REPLY

Please enter your comment!
Please enter your name here