
ಬೆಳ್ತಂಗಡಿ:ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ ಕುಂದಾಪುರ ಪ್ರಾದೇಶಿಕ ವಿಭಾಗ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗ ಉಡುಪಿ ವತಿಯಿಂದ ಮುಂಡಾಜೆಯ ಸಚಿನ್ ಭಿಡೆ ಅವರನ್ನು ಸನ್ಮಾನಿಸಲಾಯಿತು.
ಉಡುಪಿಯ ಖಾಸಗಿ ಹೋಟೆಲ್ ನ ಸಭಾಭವನದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಶನಿವಾರ ಕಾರ್ಯಕ್ರಮ ಜರಗಿತು.
ಸಚಿನ್ ಭಿಡೆಯವರು
ತಮ್ಮ ಸ್ವಂತ 5ಎಕರೆ ಭೂಮಿಯಲ್ಲಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಸುಮಾರು 800ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದು, ಇದರಲ್ಲಿ 527 ಗಿಡಗಳನ್ನು ಕಾರ್ಗಿಲ್ ಯೋಧರ ನೆನಪಿಗಾಗಿ ನೆಡಲಾಗಿದೆ.
ರಾಷ್ಟ್ರಪ್ರೇಮ, ಪರಿಸರ ಪ್ರೇಮದೊಂದಿಗೆ ಅನೇಕ ವೈದ್ಯಕೀಯ ಆಸರೆ, ಅನಾಥ ಶವಗಳ ಸಂಸ್ಕಾರ, ರಕ್ತದಾನ, ಸ್ವಚ್ಛತೆ ,ಹವಾಮಾನ ವೈಪರಿತ್ಯದ ಸಮಯ ಸಾಕಷ್ಟು ನೆರವು,ಮನೆಗಳ ದುರಸ್ತಿಗೆ ಶ್ರಮ ವಹಿಸುತ್ತಿರುವ ಇವರು ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರಾಗಿದ್ದು ಸರಕಾರದ ಆಪತ್ ಮಿತ್ರ ಯೋಜನೆಯಲ್ಲಿ ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತರಬೇತಿ ಪಡೆದಿದ್ದು ಸ್ವಯಂಸೇವಕರಾಗಿ ಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಬಹುಮುಖಿ ಸೇವೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.








