ಬೆಳ್ತಂಗಡಿ : ಕುವೆಟ್ಟು ಗ್ರಾಮದ ಗುರುವಾಯನ ಕೆರೆಯಲ್ಲಿರುವ 14.72 ಎಕ್ರೆ ವ್ಯಾಪ್ತಿಯಲ್ಲಿ ವ್ಯಾಪಿಸಿರುವ ವಿಶಾಲವಾದ ಕೆರೆಯಲ್ಲಿ ಎರಡು ದಿನಗಳಿಂದ ಮೀನುಗಳು ಸತ್ತು ತೇಲುತ್ತಿದ್ದು ಸ್ಥಳಕ್ಕೆ ವಿವಿಧ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಕೆರೆಯ ಎರಡೂ ಬದಿಗಳಲ್ಲಿ ಮೀನುಗಳು ಸತ್ತು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಗ್ರಾಮ ಪಂಚಾಯತಿಗೆ ಮಾಹಿತಿ ನೀಡಿದ್ದಾರೆ. ವಿಶಾಲವಾದ ಕೆರೆಗೆ ತ್ಯಜ್ಯಗಳು ಸೇರುತ್ತಿರುವ ಬಗ್ಗೆ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಬಾಧಿಕಾರಿಗಳು ಭೇಟಿ ನೀಡಿ ನೀರಿನ ಮಾದರಿಗಳನ್ನು ಹಾಗೂ ಸತ್ತು ತೇಲುತ್ತಿರುವ ಮೀನುಗಳನ್ನು ಶೇಖರಿಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಾದರಿಗಳನ್ನು ಪರಿಶೀಲಿಸಿ ಪಡೆದುಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಸ್ಥಳಕ್ಕೆ ಬೆಳ್ತಂಗಡಿ ತಾಲೂಕು ಪಂಚಾಯತು ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಹಾಗೂ ಇತರರು ಭೇಟಿ ನೀಡಿದರು.
ಮೂರು ವರ್ಷಗಳಿಗೆ ಏಲಂ ಮಾಡಿದವರಿಗೆ ಭಾರೀ ನಷ್ಟ;
ಅತ್ಯಂತ ವಿಶಾಲವಾದ ಗುರುವಾಯನಕೆರೆ ಕೆರೆ ಯಲ್ಲಿ ಮೀನುಗಳನ್ನು ಹಾಕಲು ಹಾಗೂ ಮೀನುಗಳನ್ನು ಹಿಡಿಯಲು ಟೆಂಡರ್ ಕರೆದು ನೀಡಲಾಗಿತ್ತು.
ಇದೇ ಗ್ರಾಮದ ಮೀನು ವ್ಯಾಪಾರಿ ರಿಯಾದ್ ಎಂಬವರು ಗ್ರಾ.ಪಂ. ಏಲಂನಲ್ಲಿ ಭಾಗವಹಿಸಿ ಮೂರು
ವರ್ಷಗಳ ಖಾಯಂ ಅವಧಿಗೆ
6 ಲಕ್ಷ ರೂಪಾಯಿಗೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ನಷ್ಟ ಭರಿಸಿಕೊಡುವಂತೆ ಗ್ರಾಮಪಂಚಾಯತ್ ಆಡಳಿತಕ್ಕೆ ಲಿಖಿತ ದೂರು ನೀಡಿದ್ದಾರೆ




