Home ಅಪರಾಧ ಲೋಕ ಬಂಟ್ವಾಳ ಚಿನ್ನಾಭರಣ ಕಳವು ಪ್ರಕರಣದಲ್ಲಿ ಅಂತರ್ ರಾಜ್ಯದ ಆರೋಪಿಯ ಬಂಧನ . 20 ಲಕ್ಷ ರೂಪಾಯಿ...

ಬಂಟ್ವಾಳ ಚಿನ್ನಾಭರಣ ಕಳವು ಪ್ರಕರಣದಲ್ಲಿ ಅಂತರ್ ರಾಜ್ಯದ ಆರೋಪಿಯ ಬಂಧನ . 20 ಲಕ್ಷ ರೂಪಾಯಿ ಮೌಲ್ಯ ಚಿನ್ನಾಭರಣಗಳು ವಶಕ್ಕೆ

0
3

ಮಂಗಳೂರು; 2025 ರ ನವೆಂಬರ್ 19 ರಂದು ಬಂಟ್ವಾಳ ನಗರ ಠಾಆ ವ್ಯಾಪ್ತಿಯಲ್ಲಿ, ಬಸ್ ನಲ್ಲಿ ಬ್ಯಾಗ್ ಒಳಗಡೆ ಇರಿಸಿದ್ದ ಸುಮಾರು 170 ರಿಂದ 180 ಗ್ರಾಂ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ಠಾಣೆಯಲ್ಲಿ ಅ. ಕ್ರ :132/2025 , ಕಲಂ :303(2) BNS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು , ಆರೋಪಿತನಾದ ಮಧ್ಯಪ್ರದೇಶ ರಾಜ್ಯದ ಧಾರಾ ಜಿಲ್ಲೆಯ ಸಮದ್ ಖಾನ್ (37) ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ, ಆರೋಪಿತನಿಂದ ಕಳ್ಳತನ ಮಾಡಿದ 174 ಗ್ರಾಂ ಗಳಷ್ಟು ಅಂದಾಜು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಲಾಗಿದೆ.

ಸದ್ರಿ ಆರೋಪಿ ಪತ್ತೆ ಕಾರ್ಯದಲ್ಲಿ ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಯಶ್ ಕುಮಾರ್ ಶರ್ಮಾ, ಐಪಿಎಸ್, ರವರ ನಿರ್ದೇಶನದಂತೆ, ಪ್ರಕರಣದ ತನಿಖಾಧಿಕಾರಿಯಾದ ಅನಂತ ಪದ್ಮನಾಭ ಕೆ.ವಿ,ಪೊಲೀಸ್ ನಿರೀಕ್ಷಕರು, ಬಂಟ್ವಾಳ ನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ,ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸಿಬ್ಬಂದಿಗಳಾದ ಹೆಚ್.ಸಿ 719 ವಿಜಯ್ ಕುಮಾರ್, ಹೆಚ್.ಸಿ 1023 ರಾಜೇಶ್,ಹೆಚ್.ಸಿ 1037 ಇರ್ಷಾದ್, ಪಿ.ಸಿ 2294 ಬಸವರಾಜ , ಹೆಚ್.ಸಿ 310 ಸುರೇಶ್ ಕುಮಾರ್, ಸಿ ಪಿ.ಸಿ 2471 ವಿಜಯ್ ಕುಮಾರ್, ಮಪಿಸಿ 2436 ರೇವತಿ ಹಾಗೂ ಜಿಲ್ಲಾ ಪೊಲೀಸ್ ಘಟಕದ ಗಣಕ ಯಂತ್ರ ವಿಭಾಗದ ಸಿಬ್ಬಂದಿಗಳಾದ ಸಂಪತ್ ಕುಮಾರ್ ಹಾಗೂ ದಿವಾಕರ ರವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

NO COMMENTS

LEAVE A REPLY

Please enter your comment!
Please enter your name here