Home ಸ್ಥಳೀಯ ಸಮಾಚಾರ ಕಡಬ : ಯೂಟ್ಯೂಬರ್ ಸಂತೋಷ್ ಕಡಬ ಬೆಂಗಳೂರು ಪೊಲೀಸ್ ವಶಕ್ಕೆ

ಕಡಬ : ಯೂಟ್ಯೂಬರ್ ಸಂತೋಷ್ ಕಡಬ ಬೆಂಗಳೂರು ಪೊಲೀಸ್ ವಶಕ್ಕೆ

0
2

ಬೆಳ್ತಂಗಡಿ : ಕೋರ್ಟ್ ಆದೇಶ ಉಲ್ಲಂಘನೆ ಪ್ರಕರಣ ಸಂಬಂಧ 30 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿದ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸರು ಸಂಚಾರಿ ಸ್ಟುಡಿಯೋ ಯೂಟ್ಯೂಬರ್ ಸಂತೋಷ್ ಕಡಬ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಪದೆ ಪದೆ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಮೂಲಕ ಅವಹೇಳನಕಾರಿಯಾಗಿ ವಿಡಿಯೋ ಮಾಡಿ ಪ್ರಸಾರ ಮಾಡಿದ ಪ್ರಕರಣ ಸಂಬಂಧ ನೋಟಿಸ್ ಜಾರಿಯಾಗಿದ್ದರು ಕೂಡ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮತ್ತೆ ವಿಡಿಯೋ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 30 ದನಗಳ ಕಾಲ ಜೈಲು ಶಿಕ್ಷೆ ಆದೇಶ ಹೊರಡಿಸಿತ್ತು ಹಿನ್ನೆಲೆಯಲ್ಲಿ ಕೋರ್ಟ್ ಸಿಬ್ಬಂದಿ ಜೊತೆಯಲ್ಲಿ ಬೆಂಗಳೂರು ಪೊಲೀಸರು ಫೆ‌.18 ರಂದು ಕಡಬಕ್ಕೆ ಆಗಮಿಸಿ ಸಂತೋಷ್ ನನ್ನು ಆತನ ಶಾಪ್ ನಿಂದ ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ.

ಸಂಜೆ ವೇಳೆಗೆ ಬೆಂಗಳೂರು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸುವ ಸಾಧ್ಯತೆಯಿದೆ.

NO COMMENTS

LEAVE A REPLY

Please enter your comment!
Please enter your name here