Home ಶಾಲಾ ಕಾಲೇಜು ಉಜಿರೆಯ ಮುಹಮ್ಮದ್ ನಿಶ್ವಾನ್ ಗೆ ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ

ಉಜಿರೆಯ ಮುಹಮ್ಮದ್ ನಿಶ್ವಾನ್ ಗೆ ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ

39
0

ಬೆಳ್ತಂಗಡಿ; ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಗಾಂಧಿನಗರ ನಿವಾಸಿ ನಫೀಸಾ ಶೀಬಾ. ಉಸ್ಮಾನ್ ದಂಪತಿಯ ಪುತ್ರ ಮಂಗಳೂರಿನ ಯೆನೆಪೋಯ ಯುನಿವರ್ಸಿಟಿಯ ಅಂತಿಮ ವರ್ಷದ ಎಂ.ಬಿ.ಎ ಹಾಗೂ cma ವಿದ್ಯಾರ್ಥಿ ಮುಹಮ್ಮದ್ ನಿಶ್ವಾನ್. ಕರ್ನಾಟಕ ಸರ್ಕಾರದ ಎನ್.ಎಸ್.ಎಸ್. ಅತ್ಯುತ್ತಮ ಸ್ವಯಂಸೇವಕ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಕರ್ನಾಟಕ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರದ ಸನ್ಮಾನ್ಯ ಥಾವರ್ ಚಂದ್ ಗೆಹ್ಲೋಟ್ ಇವರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.ಇವರು ಬಹುಮುಖ ಪ್ರತಿಭೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ನಡೆದ ಯುವ ಸಂಸತ್ತಿನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಅನೇಕ ಸಾಧನೆಗಳೊಂದಿಗೆ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿ ಕೊಂಡ ಅದ್ಭುತ ಪ್ರತಿಭೆ ಮುಹಮ್ಮದ್ ನಿಶ್ವಾನ್ ಅವರ ಸಾಧನೆಗೆ ಎಲ್ಲರೂ ಅಭಿನಂದನೆ ಸಲಗಲಿಸಿದ್ದಾರೆ.
ವರದಿ
ಅಮ್ಮಿ ಬೆಳ್ತಂಗಡಿ

LEAVE A REPLY

Please enter your comment!
Please enter your name here