Home ಸ್ಥಳೀಯ ಸಮಾಚಾರ ಧರ್ಮಸ್ಥಳ: ಜೋಡುಸ್ತಾನ ರಸ್ತೆಗೆ ಪದ್ಮವಿಭೂಷಣ ಡಾ. ಡಿ ವೀರೇಂದ್ರ ಹೆಗಡೆ ರಸ್ತೆ ಎಂದು ನಾಮಕರಣ.

ಧರ್ಮಸ್ಥಳ: ಜೋಡುಸ್ತಾನ ರಸ್ತೆಗೆ ಪದ್ಮವಿಭೂಷಣ ಡಾ. ಡಿ ವೀರೇಂದ್ರ ಹೆಗಡೆ ರಸ್ತೆ ಎಂದು ನಾಮಕರಣ.

25
0

ಧರ್ಮಸ್ಥಳ :- ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ರಸ್ತೆಯನ್ನು ಸಾರ್ವಜನಿಕರ ಬೇಡಿಕೆಯಂತೆ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ರಸ್ತೆ ಎಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲಾ ಇವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಡಿ ಹರ್ಷೇಂದ್ರ ಕುಮಾರ್ ರವರು ನಾಮಫಲಕವನ್ನು ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ್ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲಾ ಪರಮೇಶ್ವರ್, ಉಪಾಧ್ಯಕ್ಷರಾದ ಶ್ರೀ ಪಿ ಶ್ರೀನಿವಾಸ್ ರಾವ್, ಸದಸ್ಯರಾದ ಶ್ರೀ ಮುರಳಿಧರ ದಾಸ್, ಶ್ರೀ ದಿನೇಶ್ ರಾವ್, ಶ್ರೀ ರಾಮಚಂದ್ರರಾವ್, ಶ್ರೀ ರವಿಕುಮಾರ್, ಶ್ರೀಮತಿ ಸುನಿತಾ ಶ್ರೀಧರ್, ಶ್ರೀಮತಿ ಸುನಿತಾ ಡಿಕೆ, ಶ್ರೀ ಸುಧಾಕರ, ಮಾಜಿ ಪಂಚಾಯತ್ ಸದಸ್ಯರಾದ ಶ್ರೀ ಲಕ್ಷ್ಮಿ ನಾರಾಯಣ್ ರಾವ್, ಶ್ರೀ ಭುಜಬಲಿ, ಶ್ರೀ ಅರುಣ್ ಕುಮಾರ್, ಊರಿನ ಪ್ರಮುಖರಾದ ಶ್ರೀ ಸುಬ್ರಮಣ್ಯ ಪ್ರಸಾದ್, ಶ್ರೀ ಜಗದೀಶ್ ಜೈನ್, ಶ್ರೀ ಅಭಿಷೇಕ್ ಸಾರ್ವಜನಿಕರು ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಶ್ರೀಮತಿ ವಂದನ ಪ್ರಶಾಂತ್ ಬಲ್ಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here