

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಜ.23 ರಂದು ವಿಚಾರಣೆ ನಡೆದಿದ್ದು ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮತ್ತೆ ಫೆ.5 ಕ್ಕೆ ಮುಂದೂಡಿದ್ದಾರೆ.
ಬಂಟ್ಬಾಳದ ಪ್ರಭಾರ ನ್ಯಾಯಾಧೀಶರಾದ ಬೆಳ್ತಂಗಡಿ ಪ್ರಧಾನ ವ್ಯವಹಾರಿಕ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯಾಗಿರುವ ರಾಜೇಂದ್ರ ಪ್ರಸಾದ್ ಅವರು ಪ್ರಕರಣದ ವಿಚಾರಣೆ ನಡೆಸಿದರು.
ಎಸ್.ಐ.ಟಿ ನೀಡಿರುವ ವರದಿಗೆ ಸಂಬಂಧಿಸಿದ ಪ್ರಕರಣದಲ್ಲಿ ತಾವು ಸಂತ್ರಸ್ತರಾಗಿದ್ದು ತಮ್ಮನ್ನೂ ಕಕ್ಷಿದಾರರಾಗಿಸಬೇಕು ಎಂದು ಶ್ರೀ ಕ್ಷೆತ್ರ ಧರ್ಮಸ್ಥಳ ಪರವಾಗಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಯಿತು ಈಅರ್ಜಿಗೆ ಮಹೇಶ್ ಶೆಟ್ಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಎಸ್.ಐ.ಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಕಲಾವಕಾಶ ಕೋರಿದ್ದಾರೆ.
ಬೆಳ್ತಂಗಡಿ ನ್ಯಾಯಾಲಯದಲ್ಲಿ ಧರ್ಮಸ್ಥಳದ ಪರ ಬೆಂಗಳೂರಿನ ಖ್ಯಾತ ವಕೀಲರಾದ ರಾಜಶೇಖರ್ ಹಿಲ್ಯಾರ್, ಸುನಿಲ್ , ಪ್ರದೀಪ್ ಭಾಗವಹಿಸಿದ್ದು. ಮಹೇಶ್ ಶೆಟ್ಟಿ ಹಾಗು ಇತರರ ಪರವಾಗಿ ವಾಸು ಪೂಜಾರಿ, ನ್ಯಾಯಾಲಯಕ್ಕೆ ಹಾಜರಾದರು.
ಹಾಗೂ ಎಸ್ಐಟಿ ಪರ ವಕೀಲರಾದ ದಿವ್ಯರಾಜ್ ಹಾಜರಿದ್ದರು.
ನ್ಯಾಯಾಲಯದಲ್ಲಿ ಎಸ್.ಐ.ಟಿ ಎಸ್ಪಿ ಸಿ.ಎ.ಸೈಮನ್, ಡಿವೈಎಸ್ಪಿ ಲೋಕೇಶ್ ಹಾಗೂ ಇತರ ಅಧಿಕಾರಿಗಳು ಇದ್ದರು.









