
ಬೆಳ್ತಂಗಡಿ; ಮಲವಂತಿಗೆ ಗ್ರಾಮದ ಕಜಕ್ಕೆ ನಿಸರ್ಗ ಮನೆ ನಿವಾಸಿ ವೀರೇಶ್ವರ ಮರಾಠೆ (68) ಅಲ್ಪಕಾಲದ ಅಸೌಖ್ಯದಿಂದ ಜ.4 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ ಪತ್ನಿ,ಪುತ್ರ ಹಾಗೂ ಪುತ್ರಿ ಇದ್ದಾರೆ.
ಕೃಷಿಕರಾಗಿದ್ದ ಅವರು ತಾಳ ಮದ್ದಳೆ ಅರ್ಥಧಾರಿ ಯಾಗಿ,
ಬಂಗಾಡಿ ಸಿಎ ಬ್ಯಾಂಕ್,ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ, ಶಿರಾಡಿ ದೈವಸ್ಥಾನದ ಟ್ರಸ್ಟ್ ಅಧ್ಯಕ್ಷರಾಗಿ ಹಾಗೂ ಕಜಕ್ಕೆ ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟಿ ಯಾಗಿ ಸೇವೆ ಸಲ್ಲಿಸಿದ್ದರು.








