Home ಅಪರಾಧ ಲೋಕ ಇಂದಬೆಟ್ಟು : ಜಾತಿನಿಂದನೆ ಮಾಡಿ ವ್ಯಕ್ತಿಗೆ ಚೂರಿಯಿಂದ ಇರಿತ ಆರೋಪಿ ಬಂಧನ

ಇಂದಬೆಟ್ಟು : ಜಾತಿನಿಂದನೆ ಮಾಡಿ ವ್ಯಕ್ತಿಗೆ ಚೂರಿಯಿಂದ ಇರಿತ ಆರೋಪಿ ಬಂಧನ

0
8

ಬೆಳ್ತಂಗಡಿ : ಜಾತಿ ನಿಂದನೆ ಮಾಡಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಗಾಯಗೊಳಿಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣದ ಸಂಬಂಧ ಆರೋಪಿ ಆಂಬುಲೆನ್ಸ್ ಚಾಲಕ ನೌಷದ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬಂಗಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.21 ರಂದು ರಾತ್ರಿ 9 ಗಂಟೆಗೆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಇಂದಬೆಟ್ಟು ನಿವಾಸಿ ದಯಾನಂದ ಹಾಗೂ ಸ್ನೇಹಿತರಾದ ಆರೀಫ್ ಕಲ್ಲಾಜೆ,ಆಸೀಫ್ ಇಂದಬೆಟ್ಟು, ಸ್ವಾಲಿ ನಾವೂರ ಜೊತೆ ತೆರಳಿದ್ದು. ಸುಮಾರು ರಾತ್ರಿ 9:30 ರ ವೇಳೆಗೆ ಸ್ನೇಹಿತರಾದ ಆರೀಫ್ ಜೊತೆ ಆರೋಪಿ ಆಂಬುಲೆನ್ಸ್ ಚಾಲಕ ನಾವೂರು ನಿವಾಸಿ ನೌಷದ್ ಸ್ಥಳಕ್ಕೆ ಬಂದು ಕ್ಷುಲ್ಲಕ ವಿಚಾರದಲ್ಲಿ ಮಾತಿನ ಜಗಳವಾಡಿ ಕೈಯಿಂದ ಹಲ್ಲೆ ನಡೆಸಿದಾಗ ದಯಾನಂದ್ ಇದನ್ನು ವಿರೋಧಿಸಿದ್ದು ದಯಾನಂದರವರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿ ಜೀವಬೆದರಿಕೆ ಹಾಕಿದ್ದಾನೆ. ಇದನ್ನು ದಯಾನಂದ ಅವರು ಅಕ್ಷೇಪಿಸಿದಾಗ ಕೋಪಗೊಂಡ ನೌಷದ್ ಕೈಯಲ್ಲಿದ್ದ ಚಾಕುವಿನಿಂದ ಕೊಲೆ ಮಾಡುವ ಉದ್ದೇಶದಿಂದ ಚುಚ್ಚಲು ಬಂದಾಗ ಎಡ ಕೈಯಿಂದ ತಡೆಯುವಾಗ ದಯಾನಂದರವರ ಎಡಕೈಗೆ ಚೂರಿ ಚುಚ್ಚಿ ಗಾಯಗೊಳಿಸಿದ್ದಾನೆ‌. ಬಳಿಕ ಸ್ನೇಹಿತರು ಸೇರಿ ದಯಾನಂದ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಡಿ.22 ರಂದು ಗಾಯಗೊಂಡ ದಯಾನಂದ ನೀಡಿದ ದೂರಿನ ಮೇರೆಗೆ ತನಗೆ ಮತ್ತು ತನ್ನ ಸ್ನೇಹತ ಆರೀಫ್ ಗೆ ಆರೋಪಿ ನೌಷದ್ ಜಾತಿ ನಿಂದನೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಕೃತ್ಯ ಎಸಗಿರುವುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸರು ನೌಷದ್ ವಿರುದ್ಧ BNS -2023 (u/s-115(2),118(1),109,351(2),352), SC&ST Act-2015(u/s-3(1),(r)(s)) ರಂತೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಪುರ್ ಮಠ ಮತ್ತು ತಂಡ ಆರೋಪಿ ಆಂಬುಲೆನ್ಸ್ ಚಾಲಕ ನೌಷದ್ ನನ್ನು ಡಿ.23 ರಂದು ಸಂಜೆ ಬಂಧಿಸಿ ಮಂಗಳೂರು ಜಿಲ್ಲಾ ನ್ಯಾಯಾಧೀಶರ ಮನೆಗೆ ರಾತ್ರಿ ಹಾಜರುಪಡಿಸಿದ್ದು. ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಘಟನೆಯ ಬಗ್ಗೆ ನೌಷಾದ್ ಅವರೂ ಬೆಳ್ತಂಗಡಿ ಪೊಲೀಸರಿಗೆ ತನ್ನ ಮೇಲೆಯು ಹಲ್ಲೆ ನಡೆದಿರುವುದಾಗಿ ಆರೋಪಿಸಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

NO COMMENTS

LEAVE A REPLY

Please enter your comment!
Please enter your name here