
ಬೆಳ್ತಂಗಡಿ; ಇಂದಬೆಟ್ಟು ಗ್ರಾಮದ ತುರ್ಕರೆಬೆಟ್ಟು ರಾಜೇಶ್ ಎಂಬವರಿಗೆ ಸೇರಿದ ದನದ ಹಟ್ಟಿ, ಕೊಟ್ಟಿಗೆ ಹಾಗೂ ರಬ್ಬರ್ ಸ್ಮೋಕ್ ಹೌಸ್ ಗೆ ಶುಕ್ರವಾರ ತಡ ರಾತ್ರಿ ವೇಳೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿರುತ್ತದೆ. ಈ ಸಂದರ್ಭದಲ್ಲಿ ಸ್ಥಳಿಯರ ಸಹಕಾರದಿಂದ ಹಟ್ಟಿಯಲ್ಲಿ ಕಟ್ಟಿದ್ದ ದನ ಹಾಗೂ ಕರುವನ್ನು ರಕ್ಷಿಸಲಾಗಿದೆ, ಜನರೇ ಸೇರಿ ನೀರು ಹಾಕಿ ಬೆಂಕಿ ನಂದಿಸಲಾಗಿದೆ, ಕೊಟ್ಟಿಗೆಯಲ್ಲಿ ಇದ್ದ ರಬ್ಬರ್ ಶೀಟ್, ಅಡಿಕೆ ಹಾಗೂ ಕೃಷಿ ಸಂಬಂಧಿತ ಉಪಕರಣಗಳು, ಮೇಲ್ಚಾವಣಿ ಸುಟ್ಟು ಹೋಗಿದೆ. ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದ ಸ್ಥಳಕ್ಕೆ ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಶಾಲತಾ, ಸದಸ್ಯರಾದ ಶ್ರೀಕಾಂತ್ ಎಸ್, ಶ್ರೀಮತಿ ಸುಮಿತ್ರಾ, ಪಂಚಾಯತ್ ಕಾರ್ಯದರ್ಶಿ ಗಿರಿಯಪ್ಪ ಗೌಡ, ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.









