
ಬೆಳ್ತಂಗಡಿ : ಮೂರು ತಿಂಗಳ ಹಿಂದೆ ರಾಜ್ಯ ಸರಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರನ ಸಮಸ್ಯೆಯಿಂದ ಡಿ.17 ರಂದು ಬಂದ್ ಮಾಡಲಾಗಿತ್ತು. ಇದೀಗ ಬೆಳ್ತಂಗಡಿ ಸಮಾಚಾರ ವೆಬ್ ಸೈಟ್ ನಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಮಧ್ಯಾಹ್ನ ವೇಳೆಗೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹಾರವಾಗಿ ಮತ್ತೆ ಓಪನ್ ಮಾಡುವಂತಾಗಿದೆ.
ಗುತ್ತಿಗೆದಾರ ಸಮರ್ಪಕವಾಗಿ ದಾಖಲೆಗಳನ್ನು ಸರಕಾರಕ್ಕೆ ನೀಡದೆ ಆತನಿಗೆ ಹಣ ಸಂದಾಯವಾಗಿರಲ್ಲಿಲ್ಲ ಈ ಕಾರಣದಿಂದ ಗುತ್ತಿಗೆದಾರ ಡಿ.17 ರಂದು ಬಂದ್ ಮಾಡಿ ಹೋಗಿದ್ದ ಬಗ್ಗೆ ಬೆಳ್ತಂಗಡಿ ಸಮಾಚಾರ ವೆಬ್ ಸೈಟ್ “ಇಂದಿರಾ ಕ್ಯಾಂಟೀನ್ ಮೂರೇ ತಿಂಗಳಿಗೆ ಬಂದ್” ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಸಾರ ಮಾಡಿತ್ತು.
ಈ ಬಗ್ಗೆ ರಕ್ಷಿತ್ ಶಿವರಾಂ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿ ಬಳಿಕ ಗುತ್ರ ಗುತ್ತಿಗೆದಾರನೊಂದಿಗೆ ಹಾಗು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು ಸಮಸ್ಯೆಗೆ ತಾತ್ಕಲಿಕ ಪರಿಹಾರ ಕಂಡುಕೊಂಡು ಮತ್ತೆ ಇಂದಿರಾ ಕ್ಯಾಂಟೀನ್ ಮಧ್ಯಾಹ್ನದ ಬಳಿಕ ಓಪನ್ ಮಾಡಿದೆ









