
ಬೆಳ್ತಂಗಡಿ; ಶಿಶಿಲ ಗ್ರಾಮದಲ್ಲಿ ಕಳೆದ ಕೆಲದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ನಿರಂತರವಾಗಿ ಕೃಷಿ ಹಾನಿ ಮಾಡುತ್ತಿದೆ.
ಶಿಶಿಲದ ಮಲೆಕುಡಿಯರ ಕಾಲೊನಿಯಲ್ಲಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿದೆ. ಎರಡು ದಿನಗಳಿಂದ ಕಾಡಾನೆ ಇಲ್ಲಿಯೇ ಇದ್ದು ಜನರಲ್ಲಿ ಆತಂಕ ಮೂಡಿಸಲು ಕಾರಣವಾಗಿದೆ.
ಎರಡು ಮೂರು ಆನೆಗಳು ಇಲ್ಲಿರುವ ಅನುಮಾನ ವ್ಯಕ್ತವಾಗಿದ್ದು ಅರಣ್ಯ ಇಲಾಖೆ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸಲು ಕ್ರಮ ಕೂಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.









