ಬೆಳ್ತಂಗಡಿ : ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಕಳೆದ 90 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯನಿಗೆ ಸುಳ್ಳು ಸಾಕ್ಷಿ ವರದಿ ಸಲ್ಲಿಕೆಯಾದ ಬಳಿಕ ಜಾಮೀನು ನೀಡಲು ವಕೀಲರು ಅರ್ಜಿ ಸಲ್ಲಿಸಲಾಗಿದೆ.
ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಚಿನ್ನಯ್ಯ ಪರ ವಕೀಲರು ನ.21 ರಂದು ಎರಡನೇ ಭಾರಿಗೆ ಜಾಮೀನು ನೀಡಲು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ.ಟಿ.ಹೆಚ್ ಮುಂದೆ ಸರಕಾರಿ ವಕೀಲರಾದ ದಿವ್ಯರಾಜ್ ಮತ್ತು ಚಿನ್ನಯ್ಯ ಪರ ವಕೀಲರು ವಾದ-ಪ್ರತಿವಾದ ನಡೆಸಿದ್ದು. ಸರಕಾರಿ ವಕೀಲರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ನ.24 ರಂದು ಸೋಮವಾರಕ್ಕೆ ಮುಂದೂಡಿದೆ.




