Home ರಾಷ್ಟ್ರ/ರಾಜ್ಯ ದೆಹಲಿ ಕೆಂಪು ಕೋಟೆ ಬಳಿ ಭೀಕರ ಸ್ಪೋಟ ಹಲವರ ಸಾವು ಹಲವರಿಗೆ ಗಾಯ

ದೆಹಲಿ ಕೆಂಪು ಕೋಟೆ ಬಳಿ ಭೀಕರ ಸ್ಪೋಟ ಹಲವರ ಸಾವು ಹಲವರಿಗೆ ಗಾಯ

20
0

ದೆಹಲಿಯ ಕೆಂಪು ಕೋಟೆ ಬಳಿ ಭಾರಿ ಕಾರು ಸ್ಫೋಟ ಸಂಭವಿಸಿದ್ದು, ಆ ಪ್ರದೇಶದಲ್ಲಿ ವ್ಯಾಪಕ ಭೀತಿ ಉಂಟಾಗಿದೆ. ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರಲ್ಲಿ ಸ್ಫೋಟ ಸಂಭವಿಸಿದೆ. ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿ ಇತರ ಮೂರು ವಾಹನಗಳು ಸುಟ್ಟು ಭಸ್ಮವಾಗಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಸ್ಫೋಟದ ನಂತರ, ಕಾರಿಗೆ ಬೆಂಕಿ ಹೊತ್ತಿಕೊಂಡು, ಇತರ ಮೂರು ವಾಹನಗಳು ಸುಟ್ಟು ಭಸ್ಮವಾದವು. ದೆಹಲಿ ಪೊಲೀಸರು ಆ ಪ್ರದೇಶವನ್ನು ಸುತ್ತುವರೆದಿದ್ದಾರೆ. ಸ್ಫೋಟದಲ್ಲಿ ಐದಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ಮಾಹಿತಿಗಳು ಹೊರಬರುತ್ತಿವೆ ಹಲವರು ಗಾಯಗೊಂಡಿರುವುದಾಗಿಯೂ ಮಾಧ್ಯಮಗಳು ವರದಿ ಮಾಡಿದೆ.

“ಕೆಂಪು ಕೋಟೆ ಬಳಿ ಸ್ಫೋಟದಂತಹ ಶಬ್ದದ ಬಗ್ಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ಬಂದಿದೆ. 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿವೆ. ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಕಾರು ಸ್ಫೋಟಗೊಂಡಿದೆ” ಎಂದು ದೆಹಲಿ ಅಗ್ನಿಶಾಮಕ ಇಲಾಖೆ ಅಧಿಕೃತವಾಗಿ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ. ಸ್ಫೋಟದ ಹಿನ್ನಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದ್ದು ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ಹೊರಬರಬೇಕಾಗಿದೆ

LEAVE A REPLY

Please enter your comment!
Please enter your name here