Home ಸ್ಥಳೀಯ ಸಮಾಚಾರ ನ 5 ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾದ ಅ.ವಂ ಜೇಮ್ಸ್ ಪಟ್ಟೇರಿಲ್ ಅವರ ಧರ್ಮಾಧ್ಯಕ್ಷ ದೀಕ್ಷೆ

ನ 5 ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾದ ಅ.ವಂ ಜೇಮ್ಸ್ ಪಟ್ಟೇರಿಲ್ ಅವರ ಧರ್ಮಾಧ್ಯಕ್ಷ ದೀಕ್ಷೆ

38
0

ಬೆಳ್ತಂಗಡಿ; ‘ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ನೂತನ ಧರ್ಮಾಧ್ಯಕ್ಷರಾಗಿ ಆಯ್ಕೆಯಾಗಿರುವ ಪರಮಪೂಜ್ಯ ಮಾರ್ ಜೇಮ್ಸ್ ಪಟೇರಿಲ್ ರವರ ಧರ್ಮಾಧ್ಯಕ್ಷ ದೀಕ್ಷೆ ಹಾಗೂ ಅಧಿಕಾರ ಸ್ವೀಕಾರ ಸಮಾರಂಭ ನ 5 ರಂದು ಬೆಳ್ತಂಗಡಿ ಸೈಟ್ ಲಾರೆನ್ಸ್ ಪ್ರಧಾನ ದೇವಾಲಯಲ್ಲಿ ನಡೆಯಲಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅ.ವಂ ಜೋಸೆಫ್ ವಲಿಯಪರಂಬಿಲ್ ತಿಳಿಸಿದ್ದಾರೆ.
ಬೆಳ್ತಂಗಡಿ ಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.
ಈ ಸಮಾರಂಭದಲ್ಲಿ ಸೀರೋ ಮಲಬಾರ್ ಧರ್ಮಸಭೆಯ ಮಹಾ ಧರ್ಮಾಧ್ಯಕ್ಷರಾದ ಅತೀವಂದನೀಯ ರಾಫೇಲ್ ತಟ್ಟಿಲ್, ತಲಶೇರಿ ಆರ್ಚ್ ಬಿಷಪ್ ಅತೀವಂದನೀಯ ಡಾ ಜೋಸೆಫ್ ಪಾಂಪ್ಲಾನಿ, ಬೆಂಗಳೂರಿನ ಮೆಟ್ರೋಪಾಲಿಟನ್ ಆರ್ಚ್ ಬಿಷಪ್ ಅತೀವಂದನೀಯ ಡಾ. ಪೀಟರ್ ಮಚಾದೊ, ಕ್ಯಾಥೋಲಿಕ್ ಬಿಷನ್ಸ್ ಕಾನ್ಸಲೆನ್ಸ್ ಆಫ್ ಇಂಡಿಯಾ (CBCI) ಅಧ್ಯಕ್ಷರಾದ ಅ‌ತಿವಂದನೀಯ ಆಂಡ್ರೂಸ್ ತಾಯತ್, ಅಪೋಸ್ಟೋಲಿಕ್ ನುನ್ಸಿಯೊ ಅವರ ಉಪ ಮುಖ್ಯಸ್ಥರಾದ
ಅ.ವಂ ಅಂಡ್ರಿಯಾ ಫ್ರಾನ್ಸಿಯಾ, ಮತ್ತು ಕ್ಲಾರೆಟಿಯನ್ಸ್ ನ ಸುಪೀರಿಯರ್ ಜನರಲ್, ಮ್ಯಾಥ್ಯೂ ವೆಟ್ಟಿ ಮಟ್ಟಮ್ (ಸಿಎಂಎಫ್) , ಹಾಗೂ ಭಾರತದಾದ್ಯಂತದ ಇರುವ ಸುಮಾರು 44 ಧರ್ಮಾಧ್ಯಕ್ಷರುಗಳು ಹಾಗೂ ಧರಗುರುಗಖಳು, ಧರ್ಮಭಗಿನಿಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಧರ್ಮಾಧ್ಯಕ್ಷ ದೀಕ್ಷೆಯು ಒಂದು ಪವಿತ್ರ ಧಾರ್ಮಿಕ ಆಚರಣೆಯಾಗಿದ್ದು ಬೆಳ್ತಂಗಡಿ ಸೈಂಟ್ ಲಾರೆನ್ಸ್ ಕ್ಯಥೆಡ್ರಿಲ್ ಚರ್ಚ್ ನಲ್ಲಿ ನಡೆಯಲಿದ್ದು ಬಳಿಕ ಹೊಸ ಧರ್ಮಾಧ್ಯಕ್ಷರಾಗಿ ಅಧಿಕಾರ‌ ಸ್ವೀಕರಿಸುತ್ತಿರುವ ಅತೀ ವಂದನೀಯ ಜೇಮ್ಸ್ ಪಟ್ರೇರಿಲ್ ಮತ್ತು ನಿವೃತಿಗೊಳ್ಳುತ್ತಿರುವ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿಯವರಿಗೂ ಶುಭಕೋರಲು ಒಂದು ಸಾರ್ವಜನಿಕ ಸಮ್ಮೇಳನವು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ತಮದಲ್ಲಿ ವಿವಿಧ ಮುಖಂಡರುಗಳು ಭಾಗಿಗಳಾಗಲಿದ್ದಾರೆ ಎಂದು ತಿಳಿಸಿದರು.
ಅತೀ ವಂದನೀಯ ಲಾರೆನ್ಸ್ ಮುಕ್ಕುಯಿಯವರು ಕಳೆದ 26 ವರ್ಷಗಳಿಂದ ಧರ್ಮಪ್ರಾಂತ್ಯವನ್ನು ಮುನ್ನಡೆಸುತ್ತಿದ್ದು ಅವರು ಈಗ ನಿವೃತ್ತಿಗೊಳ್ಳುತ್ತಿದ್ದಾರೆ. ಕಳೆದ 26ವರ್ಷಗಳಲ್ಲಿ ದೇವರು ಪರಮಪೂಜ್ಯ ಲಾರೆನ್ಸ್ ರವರ ಮೂಲಕ ಈ ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ಈ ನಾಡಿನ ಜನತೆಗೆ ನೀಡಿದ ಎಲ್ಲ ಅನುಗ್ರಹಗಳಿಗೆ ಧರ್ಮಪ್ರಾಂತ್ಯವು ಚಿರರಣಿಯಾಗಿದೆ ಸಮಾಜದ ಸರ್ವತೋಮುಖ ಬೆಲವಣಿಗೆಗೆ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿಯವರ ಕೊಡುಗೆ ಅಪಾರವಾದುದ್ದು. ಅದರಲ್ಲೂ ಪ್ರಧಾನವಾಗಿ ಶಿಕ್ಷಣ, ಆರೋಗ್ಯ ಮತ್ತು ಸಮುದಾಯ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾಡಿದ ಕೊಡುಗೆ ಅದ್ವಿತೀಯವಾಗಿದೆ ಎಂದು ಅವರು ನೆನೆಸಿದರು.

ನಿವೃತ್ತರಾಗುವ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿಯವರು ಬೆಳ್ತಂಗಡಿ ಲಾಯಿಲದಲ್ಲಿರುವ ವಿಯಾನ್ನಿ ಸದನದಲ್ಲಿ ನಿವೃತ್ತಿ ಜೀವನವನ್ನು ಕಳೆಯಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ.ಸುನಿಲ್ ಐಸಾಕ್ ಮಾಹಿತಿಗಳನ್ನು ನೀಡಿದರು, ಮಾದ್ಯಮ ಸಮಿತಿ ಸದಸ್ಯರುಗಳಾದ ಜೈಸನ್ ಪಟ್ಟೇರಿ, ಐವನ್ ಆಲ್ವಿನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here