ಬೆಳ್ತಂಗಡಿ; ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳಿಯ ಗ್ರಾಮದ ಜೋಡುತ್ತಾರು ಎಂಬಲ್ಲಿ ನಡೆದಿದೆ.
ಮೃತ ಯುವಕ ಅನಿಲ್ ಪ್ರಕಾಶ್ ರೋಡ್ರಿಗಸ್ (32)ಎಂಬಾತನಾಗಿದ್ದಾನೆ ಈತ ಬೆಳ್ತಂಗಡಿಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅ26ರಂದು ರಾತ್ರಿ ಊಟ ಮಾಡಿ ಮಲಗಿದವ 27ರಂದು ಬೆಳಗ್ಗೆ ಬಾಗಿಲು ತೆಗೆಯದಿದ್ದಾಗ ಮನೆಯವರು ಕಿಟಕಿಯ ಮೂಲಕ ನೋಡಿದಾಗ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತನ ಸಹೋದರ ನೀಡಿರುವ ದೂರಿನಂತೆ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.









