ಬೆಳ್ತಂಗಡಿ; ಬೆಳ್ತಂಗಡಿಯಲ್ಲಿ ನ್ಯಾಯಕ್ಕಾಗಿ ತಹಶೀಲ್ದಾರರಿಗೆ ಮನವಿ ನೀಡಲು ಅವಕಾಶ ನೀಡದ ಪೋಲೀಸ್ ಇಲಾಖೆಯ ನಡೆ ಅತ್ಯಂತ ಖಂಡನೀಯ ಮತ್ತು ಇದು ಸರಕಾರದ ತಪ್ಪು ನಿರ್ಧಾರ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಅಬಿಪ್ರಾಯಪಡುತ್ತದೆ ಎಂದು ತಾಲೂಕು ಸಮಿತಿ ಕಾರ್ಯದರ್ಶಿ ಬಿ.ಎಂ ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೋರಾಟಗಾರರ ಮೇಲಷ್ಟೇ ಕೇಸ್ ಗಳ ಹಾಕೋದನ್ನು ನಿಲ್ಲಿಸಿ ಹೋರಾಟಗಾರರು ಹೇಳಿದ್ದನ್ನು ಸ್ವಲ್ಪ ಪರಿಶಿಲಿಸಲು ಸರಕಾರ ಪೋಲೀಸರಿಗೆ ಸೂಚನೆ ನೀಡಬೇಕಿದೆ. ಹೋರಾಟಗಾರರು ಹೇಳಿದ್ದನ್ನು ಮೊದಲು ತನಿಖೆ ಮಾಡಬೇಕೇ ವಿನಹ ಹೋರಾಟಗಾರರನ್ನಲ್ಲ ಎಂದಿರುವ ಅವರು
ಪ್ರತಿಭಟನೆ ನಡೆಸುವುವುದು ಪ್ರತಿಯೊಬ್ಬ ಪ್ರಜೆಯ ಸಂವಿಧಾನ ಬದ್ದ ಹಕ್ಕಾಗಿದೆ ಈ ಹಕ್ಕನ್ನ ಕಸಿದಿರುವುದು ಮಾತ್ರವಲ್ಲ ಮನವಿ ನೀಡುವುದಕ್ಕೂ ಅವಕಾಶ ನೀಡದೆ ತಡೆದಿರುವುದು ಅತ್ಯಂತ ಖಂಡನೀಯವಾದ ಕ್ರಮವಾಗಿದೆ, ಇದು ಸಂವಿಧಾನಕ್ಕೆ ಮಾತ್ರವಲ್ಲ ಮಾನವ ಹಕ್ಕಿಗೂ ತಡೆ ಮಾಡಿದಂತಾಗಿದೆ. ಸರಕಾರದ ಈ ಸರ್ವಾಧಿಕಾರಿ ನಡೆಯು ನ್ಯಾಯಕ್ಕೆ ಹಾಗೂ ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ. ದೌರ್ಜನ್ಯಗಳ ವಿರುದ್ದದ ಹೋರಾಟಕ್ಕೆ ಪ್ರಭಾವೀ ಶಕ್ತಿಗಳು ಆಡಳಿತವನ್ನೇ ಬಳಸಿ ಯಾವ ರೀತಿ ತಡೆಯೊಡ್ಡುತ್ತಿದೆ ಎಂಬುದಕ್ಕೆ ಬೆಳ್ತಂಗಡಿಯಲ್ಲಿ ನಿನ್ನೆ ಸೌಜನ್ಯ ಪರ ಹೋರಾಟಗಾರರು ಸರಕಾರಕ್ಕೆ ಮನವಿ ಸಲ್ಲಿಸಲು ಹೋದಾಗ ಮಾಡಿದ ತಡೆ, ಬೆದರಿಕೆ, ಕಂದಾಯ ಇಲಾಖೆ, ಪೋಲೀಸ್ ಇಲಾಖೆಗಳು ಮಾಡಿದ ಕಾನೂನುಗಳ ದುರ್ಬಳಕೆ ಎಲ್ಲವೂ ಕೂಡಾ ಒಂದು ಸ್ಪಷ್ಟ ಉದಾಹರಣೆಯಾಗಿದೆ, ರಾಜ್ಯದ ಜನ ಇದನ್ನು ಸ್ಪಷ್ಟವಾಗಿ ಗಮನಿಸಬಹುದು. ಸೌಜನ್ಯ ನ್ಯಾಯ ಯಾಕೆ ಮರೀಚಿಕೆ ಎಂಬುದು ಇದರಿಂದ ಅರ್ಥಮಾಡಿಕೊಳ್ಳಬಹುದಲ್ಲವೇ ಎಂದು ಬಿ.ಎಂ.ಭಟ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.




