ಬೆಳ್ತಂಗಡಿ: ಮನುಷ್ಯನ ಹುಟ್ಟು ಹೇಗೆ ಪ್ರಮುಖವೋ ಅಷ್ಟೆ ಮಹತ್ವ ಸಾವಿನಲ್ಲೂ ಇದೆ.ಇಂದು ನಿವೇಶನದ ಕೊರತೆಯ ಸಂದರ್ಭದಲ್ಲಿ ಅಂತಿಮ ದಹನಕ್ಕಾಗಿ ಸ್ಮಶಾನದ ಅಗತ್ಯವಿದೆ. ರುದ್ರ ಭೂಮಮಿಯ ಅಭಿವೃದ್ಧಿಗೆ ರಾಜಕೀಯ ಬಿಟ್ಟು ಎಲ್ಲರು ಕೈಜೋಡಿಸಬೇಕು ನದಿಯ ತಟದಲ್ಲಿರುವ ರುದ್ರ ಭೂಮಿಯನ್ನು ಇನ್ನು ಅಬಿವೃದ್ದಿ ಮಾಡಬೇಕಿದ್ದು ಈಗಾಗಲೇ ನಗರೋಥ್ಥಾನದಿಂದ 40 ಲಕ್ಷ ರೂ ಮಂಜೂರು ಮಾಡಿದ್ದು ಶಾಸಕರ ಅನುದಾನದಿಂದ ಮತ್ತೆ 5 ಲಕ್ಷ ಮೀಸಲಿಟ್ಟಿದ್ದು ಮುಂದೆ ಅನುದಾನ ಬಂದರೆ ನದಿಗೆ ಇಳಿಯುವ ಮೆಟ್ಟಿಲು ನಿರ್ಮಾಣಕ್ಕೆ ಅನುದಾನ ನೀಡುತ್ತೇನೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರೂ. ಅವರು ಸೋಮವಾರ ಪಟ್ಟಣ ಪಂಚಾಯತ್ ಬೆಳ್ತಂಗಡಿ ಮತ್ತು ಹಿಂದೂರುದ್ರಭೂಮಿ ಅಬಿವೃದ್ದಿ ಸಮಿತಿ, ದಾನಿಗಳ ನೆರವಿನಿಂದ ನಿರ್ಮಾಣಗೊಂಡ ಹಿಂದೂರುದ್ದ ಭೂಮಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಊರಿನ ದೇವಸ್ಥಾನ ಅಬಿವೃದ್ದಿ ಮಾಡಿದಂತೆ ರುದ್ರಭೂಮಿಯ ಅಬಿವೃದ್ದಿ ಮಾಡಬೇಕು. ಮುಂದಿನ ದಿನಗಳಲ್ಲಿ ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕಿದೆ ಎಂದರು. ಪಟ್ಟಣ ಪಂಚಾಯತ್ ಅದ್ಯಕ್ಷ ಜಯಾನಂದ ಗೌಡ ಅದ್ಯಕ್ಷತೆ ವಹಿಸಿ ಮಾತನಾಡಿ ಅತೀ ಅಗತ್ಯವಾದ ರುದ್ದಭೂಮಿ ಸುಸಜ್ಜಿತವಾಗಿ ನಿರ್ಮಿಸಬೇಕು ಎಂದು ಪ್ರಯತ್ನಿಸಲಾಗಿದ್ದು ಆದರೆ ಈ ಭಾರಿ ನಿರ್ಮಿಸಲು ಸಹಕಾರಿಯಾಯಿತು. ಇದಕ್ಕೆ ಶಾಸಕರು, ದಾನಿಗಳ ಸಹಕಾರವೇ ಕಾರಣ. ಇದರಲ್ಲಿ ಯಾವುದೇ ರಾಜಕೀಯ ಮಾಡಬಾರದು. ಇದು ಸಾರ್ವಜನಿಕರ ಸ್ವತ್ತು. ಮುಂದಿನ ದಿನಗಳಲ್ಲಿ ಇನ್ನು ಇತ್ತಮ ರೀತಿಯಲ್ಲಿ ನಿರ್ಮಿಸಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಉಪಸ್ಥಿತರಿದ್ದರು. ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಗೌರಿ, ಹಿಂದೂರುದ್ರಭೂಮಿ ಅಬಿವೃದ್ದಿ ಸಮಿತಿ ಅಧ್ಯಕ್ಷ ಶಶಿದರ ಪೈ, ಕೋಶಾದಿಕಾರಿ ಪುಷ್ಪರಾಜ್ ಶೆಟ್ಟಿ, ಪಟ್ಟಣ ಪಂಚಾಯತ್ ಸದಸ್ಯೆ ರಜನಿ ಕುಡ್ವ ಉಪಸ್ಥಿತರಿದ್ದರು. ಮುಖ್ಯಾದಿಕಾರಿ ರಾಜೇಶ್ ಸ್ವಾಗತಿಸಿ ಶಶಿದರ ಪೈ ವಂದಿಸಿದರು. ಇದೇ ಸಂದರ್ಭದಲ್ಲಿ ದಾನಿಗಳನ್ನು ಅಬಿನಂದಿಸಲಾಯಿತು. ಪದ್ಮಕುಲಾಲ್ ಕಾರ್ಯಕ್ರಮ ನಿರೂಪಿಸಿದರು.









