Home ಸ್ಥಳೀಯ ಸಮಾಚಾರ ಬೆಳ್ತಂಗಡಿ ವಕೀಲರ ಸಂಘ ಹಾಗೂ ಹೈಕೋರ್ಟ್ ಪೀಠ ಹೋರಾಟ ಸಮಿತಿ ಬೆಳ್ತಂಗಡಿ ವತಿಯಿಂದ ” ಹೈಕೋರ್ಟ್...

ಬೆಳ್ತಂಗಡಿ ವಕೀಲರ ಸಂಘ ಹಾಗೂ ಹೈಕೋರ್ಟ್ ಪೀಠ ಹೋರಾಟ ಸಮಿತಿ ಬೆಳ್ತಂಗಡಿ ವತಿಯಿಂದ ” ಹೈಕೋರ್ಟ್ ಪೀಠಕ್ಕಾಗಿ ಪೋಸ್ಟ್ ಕಾರ್ಡ್ ಅಭಿಯಾನ”

14
0

ಬೆಳ್ತಂಗಡಿ; ಬೆಳ್ತಂಗಡಿ ವಕೀಲರ ಸಂಘ ಹಾಗೂ ಹೈಕೋರ್ಟ್ ಪೀಠ ಹೋರಾಟ ಸಮಿತಿ ಬೆಳ್ತಂಗಡಿ ವತಿಯಿಂದ ” ಹೈಕೋರ್ಟ್ ಪೀಠಕ್ಕಾಗಿ ಪೋಸ್ಟ್ ಕಾರ್ಡ್ ಅಭಿಯಾನ” ನಕ್ಕೆ
ಹಿರಿಯ ವಕೀಲರು‌ ವಿಧಾನ ಪರಿಷತ್ ಸದಸ್ಯರೂ ಆದ ಪ್ರತಾಪ ಸಿಂಹ ನಾಯಕ್ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ನಮ್ಮ ರಾಜ್ಯ ದಲ್ಲಿ ಕರಾವಳಿ ಕರ್ನಾಟಕಕ್ಕೆ ಅಂದರೆ ಮಂಗಳೂರಿಗೆ ಅಗತ್ಯವಾಗಿ ಹೈಕೋರ್ಟ್ ಪೀಠ ಬೇಕಾಗಿದೆ. ಈ ನಿಟ್ಟಿನಲ್ಲಿ ಇವತ್ತು ಹಮ್ಮಿಕೊಂಡ ಈ ಅಭಿಯಾನ ನಿಜಕ್ಕೂ ಪ್ರೇರಣಾದಾಯಕವಾಗಿದೆ. ಈ ಕಾರ್ಯಕ್ಕೆ ವಕೀಲರು, ಸಾರ್ವಜನಿಕರು, ಉದ್ಯಮಿಗಳು ಹಿರಿಯರು ದನಿಗೂಡಿಸಬೇಕು ತಮ್ಮ ಸಂಪೂರ್ಣ ಸಹಕಾರ ಬೆಂಬಲವನ್ನು ನೀಡುವುದಾಗಿಯೂ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಬೆಳ್ತಂಗಡಿಯ ಅಧ್ಯಕ್ಷರಾದ ಬಿ ಕೆ ಧನಂಜಯ ರಾವ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಆರ್ಟಿಕಲ್ 21 ನ್ನು ಉಲ್ಲೇಖಸುತ್ತಾ ನ್ಯಾಯ ಪಡೆಯೋದು ಪ್ರತಿಯೊಬ್ಬರ ಹಕ್ಕು, ನ್ಯಾಯವು ಸರಿಯಾದ ಸಮಯಕ್ಕೆ ಸಿಗಬೇಕು ಈ ನಿಟ್ಟಿನಲ್ಲಿ ನಾವು ಅಭಿಯಾನ ಹೋರಾಟವನ್ನು ಮಾಡುತ್ತಾ ಬಂದಿದ್ದೇವೆ ಪ್ರತಿಯೊಬ್ಬರೂ ನಮ್ಮೊಂದಿಗೆ ಕೈಜೋಡಿಸಿದಾಗ ನಾವು ನಮ್ಮ ಗುರಿ ತಲುಪಲು ಸಾಧ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ಮಾತನಾಡುತ್ತಾ ಅತೀ ಶೀಘ್ರದಲ್ಲಿ ನಮ್ಮ ಕರಾವಳಿ ಭಾಗಕ್ಕೆ ಹೈಕೋರ್ಟ್ ಪೀಠ ಬರುವ ಸಾಧ್ಯತೆ ಇದೆ. ಈ ಬಗ್ಗೆ ನಾವು ಸರಕಾರವನ್ನು ಇನ್ನಷ್ಟು ತ್ವರಿತಗತಿಯಲ್ಲಿ ತಲುಪುವವರಿದ್ದೇವೆ. ಹಾಗಾಗಿ ಈ ದಿನ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈ ಪೋಸ್ಟ್ ಕಾರ್ಡ್ ಅಭಿಯಾನ ಹಮ್ಮಿಕೊಂಡಿದ್ದು ಇದರಲ್ಲಿ ವಕೀಲರುಗಳು, ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಿದ್ದು ನಮ್ಮ ಹೋರಾಟಕ್ಕೆ ಇನ್ನಷ್ಟು ಬಲವನ್ನು ತುಂಬಿದೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ನವೀನ್ ಬಿ ಕೆ ವಂದಿಸಿದರು.

ಈ ಅಭಿಯಾನ ದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರುಗಳು ಹಾಜರಿದ್ದರು.
ನೆರೆದಿದ್ದ ಎಲ್ಲರೂ ಪೋಸ್ಟ್ ಕಾರ್ಡ್ ಗೆ ಸಹಿಯನ್ನು ಮಾಡುವ ಮೂಲಕ ಅಭಿಯಾನ ದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದ ನಿರೂಪಣೆ ಯನ್ನು ಹೈಕೋರ್ಟ್ ಹೋರಾಟ ಸಮಿತಿ ಬೆಳ್ತಂಗಡಿ ಯ ಕಾರ್ಯದರ್ಶಿ ಶೈಲೇಶ್ ತೋಸರ್ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here