Home ಸ್ಥಳೀಯ ಸಮಾಚಾರ ವಾಲಿಬಾಲ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಜೆಸ್ವಿನ್ ಪಾಲಾಟಿ ಯವರಿಗೆ ಕೆ.ಎಸ್.ಎಂ.ಸಿ ಎ  ವತಿಯಿಂದ ಅಭಿನಂದನೆ

ವಾಲಿಬಾಲ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಜೆಸ್ವಿನ್ ಪಾಲಾಟಿ ಯವರಿಗೆ ಕೆ.ಎಸ್.ಎಂ.ಸಿ ಎ  ವತಿಯಿಂದ ಅಭಿನಂದನೆ

1
0

ಬೆಳ್ತಂಗಡಿ; ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಸೈಟ್ ಸಾವಿಯೋ ಶಾಲೆಯ ವಿದ್ಯಾರ್ಥಿ ಜೆಸ್ವಿನ್ ಪಾಲಾಟಿ ಯವರನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಕೆ.ಎಸ್.ಎಂ.ಸಿ
ಸಂಘಟನೆಯ ವತಿಯಿಂದ ಅಭಿನಂದಿಸಲಾಯಿತು. ತೋಟ್ಟತಾಡಿ ಫೊರೋನಾ ಚರ್ಚಿನ ಧರ್ಮಗುರುಗಳಾದ ಫಾ. ಜೋಸ್ ಪೂವತಿಂಕಲ್ ಅಭಿನಂದನಾ ಭಾಷಣ ಮಾಡಿದ್ರು. ಕೆ.ಎಸ್.ಎಂ.ಸಿ ಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿ ಸನ್ಮಾನಿಸಿದರು. ರೆ ಫಾ. ಮ್ಯಾಥ್ಯೂ ಮಣಪ್ಪಟ್ , ಸಂಘಟನೆಯ ಪಿ.ಆರ್.ಒ ಸೆಬಾಸ್ಟಿಯನ್ ಪಿ.ಸಿ , ತೊಟ್ಟತ್ತಾಡಿ ವಲಯ ಅಧ್ಯಕ್ಷ ಡೆನ್ನಿಸ್, ತೊಟ್ಟತ್ತಾಡಿ ಹಾಗೂ ಕಾಂಚಾಲ್ ಧರ್ಮಕೇಂದ್ರದ ಟ್ರಸ್ಟಿ ಗಳು, ಜೆಸ್ವಿನ್ ರವರ ಮನೆಯವರು, ಅಭಿಮಾನಿಗಳು ಸೇರಿದ್ರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಮಲಯಾಟ್ಟಿಲ್ ಸ್ವಾಗತಿಸಿದರು , ಮಾಜಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೆ ಸಿ. ವಂದನಾರ್ಪಣೆ ಮಾಡಿದ್ರು. ಪಂಚಾಯತು ಸದಸ್ಯ ವಿ.ಡಿ ಫ್ರಾನ್ಸೀಸ್ ಇದ್ದರು.

LEAVE A REPLY

Please enter your comment!
Please enter your name here