ಬೆಳ್ತಂಗಡಿ; ಒಡಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ನಡೆದ 40ನೇ ರಾಷ್ಟ್ರೀಯ ಜೂನಿಯರ್ ಆಥ್ಲೆಟಿಕ್ಸ್ ಕ್ರೀಡಾಕೂಟ 2025ರಲ್ಲಿ 4×100 ರಿಲೇ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರಧಿನಿಧಿಸಿ ಚಿನ್ನದ ಪದಕವನ್ನು ಪಡೆದ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಮರೋಡಿ ಗ್ರಾಮದ ಪಲಾರಗೋಳಿಯ ಸರ್ವಜೀತ್ ಅವರ ಮನೆಗೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಅಭೊನಂದಿಸಿದರು. ಈ ಸಂದರ್ಭದಲ್ಲಿ ಜಯಂತ್ ಕೋಟ್ಯಾನ್ ಹಾಗೂ ಇತರರು ಇದ್ದರು.

