Home ಕ್ರೀಡಾ ಸಮಾಚಾರ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ ಆಳ್ವಾಸ್ ಪ್ರಥಮ, ಎಸ್.ಡಿ.ಎಂ‌ ದ್ವಿತೀಯ

ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ ಆಳ್ವಾಸ್ ಪ್ರಥಮ, ಎಸ್.ಡಿ.ಎಂ‌ ದ್ವಿತೀಯ

1
0

ಬೆಳ್ತಂಗಡಿ: ಮೂರು ದಿನಗಳ ಕಾಲ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ಮಂಗಳೂರು ವಿ.ವಿ. ಅಂತರ ಕಾಲೇಜು ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜು ತಂಡ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು.
ಅತಿಥೇಯ ಉಜಿರೆಯ ಎಸ್.ಡಿ.ಎಂ. ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು.
ಮೂರು ದಿನ ನಡೆದ ಟೂರ್ನಿಯಲ್ಲಿ ಒಟ್ಟು 27 ತಂಡಗಳು ಭಾಗವಹಿಸಿದವು.
ಫಲಿತಾಂಶ: ಆಳ್ವಾಸ್ ಕಾಲೇಜು, ಮೂಡಬಿದ್ರೆ, (ಪ್ರಥಮ) ಎಸ್.ಡಿ.ಎಂ. ಕಾಲೇಜು, ಉಜಿರೆ (ದ್ವಿತೀಯ) ನಾರಾಯಣ ಗುರು ಕಾಲೇಜು, ಕುದ್ರೋಳಿ, ಮಂಗಳೂರು (ತೃತೀಯ), ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ (ನಾಲ್ಕನೆ ಸ್ಥಾನ)
ಉತ್ತಮ ಧಾಳಿದಾರ : ರಾಹುಲ್, ಆಳ್ವಾಸ್ ಕಾಲೇಜು, ಮೂಡಬಿದ್ರೆ
ಉತ್ತಮ ಆಲ್ ರೌಂಡರ್: ಮಹ್ಮದ್ ಅಫ್ರೀದ್, ಎಸ್.ಡಿ.ಎಂ. ಕಾಲೇಜು, ಉಜಿರೆ
ಉತ್ತಮ ಲಿಬ್ರೋ: ಮಂಜು, ಆಳ್ವಾಸ್ ಕಾಲೇಜು, ಮೂಡಬಿದ್ರೆ
ಉತ್ತಮ ಸೆಟ್ಟರ್: ಪುನೀತ್, ಆಳ್ವಾಸ್ ಕಾಲೇಜು, ಮೂಡಬಿದ್ರೆ
ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ ಅಧ್ಯಕ್ಷತೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

LEAVE A REPLY

Please enter your comment!
Please enter your name here