Home ಅಪರಾಧ ಲೋಕ ಬೆಳ್ತಂಗಡಿ : ಮದನ್ ಬುಗುಡಿ ಬೆಳ್ತಂಗಡಿ ಠಾಣೆಗೆ ಹಾಜರು

ಬೆಳ್ತಂಗಡಿ : ಮದನ್ ಬುಗುಡಿ ಬೆಳ್ತಂಗಡಿ ಠಾಣೆಗೆ ಹಾಜರು

0
2

ಬೆಳ್ತಂಗಡಿ : ಗಿರೀಶ್ ಮಟ್ಟಣ್ಣನವರ್ ಅವರು ಮಾನವಹಕ್ಕುಗಳ‌ ಅಯೋಗದ ಅಧಿಕಾರಿ ಎಂದು ಮಾಧ್ಯಮದ ಮುಂದೆ ಪರಿಚಯಿಸಿದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿರುವ ದೂರಿನ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಆಗಿರುವ ಮದನ್ ಬುಗುಡಿ ಅವರು ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡು ಅ14ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ತಮ್ಮ ವಕೀಲರೊಂದಿಗೆ ಹಾಜರಾದರು.
‍ ಗಿರೀಶ್ ಮಟ್ಟಣ್ಣವರ್ ಅವರು ಮಾದ್ಯಮದ ಮುಂದೆ ಮಾತನಾಡಿದಾಗ ಮದನ್ ಬುಗುಡಿ ಅವರನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿದ್ದರು. ಈ ಬಗ್ಗೆ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಮದನ್ ಬುಗುಡಿ ವಿರುದ್ಧ ಪ್ರವೀಣ್ ಗುಡಿಗಾರ ಎಂಬವರು 30.08.2025 ದೂರು ನೀಡಿದ್ದರು ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿತ್ತು.
ಈ ದೂರಿನ ಸಂಬಂಧ ಕೋರ್ಟ್ ನಲ್ಲಿ ಜಾಮೀನು ಪಡೆದುಕೊಂಡ ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಹುಬ್ಬಳಿಯ ಮದನ್ ಬುಗುಡಿ ತಮ್ಮ ವಕೀಲರ ಮೂಲಕ ಅ.14 ರಂದು ಮಧ್ಯಾಹ್ನ 2:30 ಕ್ಕೆ ಹಾಜರಾಗಿದ್ದು ಸಂಜೆ 6.30ರ ಸುಮಾರಿಗೆ ವಿಚಾರಣೆ ಮುಗಿಸಿ ಹಿಂತಿರುಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here