Home ಸ್ಥಳೀಯ ಸಮಾಚಾರ ಬೆಳ್ತಂಗಡಿ: ಸೌಜನ್ಯ ಪ್ರಕರಣ‌ ನ್ಯಾಯಕ್ಕಾಗಿ ಜನಾಗ್ರಹ ದಿನಾಚರಣೆ; ನ್ಯಾಯ ಸಿಗುವ ವಿಶ್ವಾಸವೇ ಹೊರಟು ಹೋಗುತ್ತಿದೆ ಕುಸುಮಾವತಿ

ಬೆಳ್ತಂಗಡಿ: ಸೌಜನ್ಯ ಪ್ರಕರಣ‌ ನ್ಯಾಯಕ್ಕಾಗಿ ಜನಾಗ್ರಹ ದಿನಾಚರಣೆ; ನ್ಯಾಯ ಸಿಗುವ ವಿಶ್ವಾಸವೇ ಹೊರಟು ಹೋಗುತ್ತಿದೆ ಕುಸುಮಾವತಿ

0
27

ಬೆಳ್ತಂಗಡಿ; ಧರ್ಮಸ್ಥಳ ಸೌಜನ್ಯ ಪ್ರಕರಣ ನ್ಯಾಯಕ್ಕಾಗಿ ಜನಾಗ್ರಹ ದಿನಾಚರಣೆ ಹಾಗೂ ಧರ್ಮಸ್ಥಳ ದೌರ್ಜನ್ಯ ಗಳು ಮತ್ತು ಇತಿಹಾಸ ಮತ್ತು ವರ್ತಮಾನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಅ 9 ರಂದು ನಡೆಯಿತು.
ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಬಿಡುಗಡೆ ಗೊಳಿಸಿದರು.
ಬಳಿಕ ಮಾತನಾಡಿದ ಅವರು ರಾಜ್ಯದಾಧ್ಯಂತ ಹೋರಾಟ ನಡೆಯುತ್ತಿದೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ನ್ಯಾಯ ಸಿಗುವ ವರೆಗೆ ಎಲ್ಲರೀತಿಯ ಹೋರಾಟವನ್ನು ನಿರಂತರವಾಗಿ ಮುಂದುವರಿಯಲಿದೆ. ರಾಜ್ಯದ ಜನತೆ
ಎಸ್.ಐ.ಟಿ ತನಿಖೆಯ ಬಗ್ಗೆ ವಿಶ್ವಾಸವಿರಿಸಿದೆ. ಈ ವಿಶ್ವಾಸವನ್ನು ಉಳಿಸುವ ಕಾರ್ಯವನ್ನು ಎಸ್.ಐ.ಟಿ ಮಾಡಬೇಕಾಗಿದೆ. ಈ ತನಿಖೆ ಪ್ರಾಮಾಣಿಕವಾಗಿ ನಡೆದರೆ ಸತ್ಯ ಹೊರಬರಲಿದೆ ಎಂಬುದು ಎಲ್ಲರ ವಿಶ್ವಾಸವಾಗಿದೆ. ನ್ಯಾಯಾಲಯದಲ್ಲಿ ತಡೆಯಾಜ್ಞೆಯಿದೆ ಎಂದು ಕಾರ್ಯಕ್ರಮಗಳಿಗೆ ಪೊಲೀಸರು ಅಡ್ಡಿಪಡಿಸುತ್ತಿದ್ದರೆ ಎಂದು ಆರೋಪಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಹೋರಾಟಗಾರರಾದ ವಿಷ್ಣುಮೂರ್ತಿ ಭಟ್, ಸಿಪಿಐಎಂ ಮುಖಂಡ ಯಾದವ ಶೆಟ್ಟಿ, ಬಿ.ಎಂ ಭಟ್, ಸೌಜನ್ಯ ತಾಯಿ ಕುಸುಮಾವತಿ, ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ರೈತ ಮುಖಂಡಲಕ್ಷ್ಮಣ ಗೌಡ ವಹಿಸಿದ್ದರು.
ಸಮುದಾಯ ಜಿಲ್ಲಾ ಅಧ್ಯಕ್ಷ ಮನೋಜ್ ಕುಮಾರ್ ಡಿ.ವೈ ಎಫ್.ಐ ಜಿಲ್ಲಾ ಅಧ್ಯಕ್ಷ ಇಮ್ತಿಯಾಜ್, ಮಾನವ ಬಂದುತ್ವ ವೇದಿಕೆಯ ಚೆನ್ನಕೇಶವ
ಪದ್ಮಲತಾ ಕುಟುಂಬದ ಇಂದ್ರಾವತಿ,ಶಶಿಧರನ್, ಜನವಾದಿ ಮಹಿಳಾ ಸಂಘದ ಕಿರಣ ಪ್ರಭ ಈಶ್ವರಿ ಹಾಗು ಇತರರು ಇದ್ದರು.

ತನಿಖೆಯ ಮೇಲಿನ ನಂಬಿಕೆಯೇ ಹೊರಟು ಹೋಗಿದೆ ಕುಸುಮಾವತಿ


ಸಭೆಯಲ್ಲಿ ಮಾತನಾಡಿದ ಸೌಜನ್ಯ ತಾಯಿ ಕುಸುಮಾವತಿ ಕಳೆದ 13ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ಆದರೆ ನ್ಯಾಯ ಮಾತ್ರ ಸಿಗುತ್ತಾ ಇಲ್ಲ. ಇದೀಗ ನ್ಯಾಯ ಕೇಳಿದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಲು ಮುಂದಾಗುತ್ತಿದ್ದಾರೆ. ನ್ಯಾಯ ಕೇಳುವುದು ತಪ್ಪೇ ಎಂದು ಪ್ರಶ್ನಿಸಿದರು. ನ್ಯಾಯಕ್ಕಾಗಿ ನಡೆಯುವ ಹೋರಾಡುವನ್ನು ಯಾವುದೆ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದರು.

NO COMMENTS

LEAVE A REPLY

Please enter your comment!
Please enter your name here