


ಬೆಳ್ತಂಗಡಿ : ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರ ಗಡಿಪಾರು ಆದೇಶದ ವಿರುದ್ದ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಅ8ರಂದು ನಡೆದಿದ್ದು ಬಳಿಕ ವಿಚಾರಣೆಯನ್ನು ಅ13ಕ್ಕೆ ಮುಂದೂಡಲಾಗಿದೆ
ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಒಂದು ವರ್ಷ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಪುತ್ತೂರು ಎಸಿ ಆದೇಶ ಹೊರಡಿಸಿದ್ದರು ಈ ಆದೇಶದ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಗೆ ಮೊರೆ ಹೋಗಿದ್ದರು. ಹೈಕೋರ್ಟ್ ಅರ್ಜಿ ಸ್ವೀಕರಿಸಿ ಮಹೇಶ್ ಶೆಟ್ಟಿ ವಿರುದ್ದ ಬಲವಂತದ ಕ್ರಮ ಬೇಡ ಎಂದು ಆದೇಶಕ್ಕೆ ಮಧ್ಯಂತರ ತಡೆ ನೀಡಿ ಅರ್ಜಿ ವಿಚಾರಣೆ ಅ.8 ಕ್ಕೆ ನಿಗಧಿ ಪಡಿಸಿತ್ತು. ಇಂದು ವಿಚಾರಣೆ ವೇಳೆ ಮಹೇಶ್ ಶೆಟ್ಟಿ ಪರ ವಕೀಲರು ಹಾಗೂ ಸರಕಾರಿ ವಕೀಲರಿಂದ ವಾದ ನಡೆದಿದ್ದು ಮತ್ತೆ ಮುಂದಿನ ಅ.13 ಕ್ಕೆ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಪೀಠ ಮುಂದುಡಿದೆ.
