


ಬೆಳ್ತಂಗಡಿ; ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ ಜೆ.ಎಮ್.ಎಫ್ ಸಭಾ ಭವನದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಬಿ.ಶೇಖುಂಞ್ಞ ಯವರು ನೂತನ ಅಧ್ಯಕ್ಷರಾದ ಖಾಲಿದ್ ಪುಲಾಬೆ ಯವರಿಗೆ ಅಧಿಕಾರ ಹಸ್ತಾಂತರಿಸುವ ಮೂಲಕ ನಡೆಯಿತು. ಹಿರಿಯರಾದ ಅಬ್ದುಲ್ ಲತೀಫ್ ಸಾಹೇಬ್ ಜಮೀಯತುಲ್ ಫಲಾಹ್ ನಡೆದು ಬಂದ ದಾರಿ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ನಿಕಟ ಪೂರ್ವ ಕೋಶಾಧಿಕಾರಿ ಅಬ್ಬೋನು ಮದ್ದಡ್ಕ, ನೂತನ ಪ್ರಧಾನ ಕಾರ್ಯದರ್ಶಿಗಳಾದ ಉಮರ್ ಬೆಳ್ತಂಗಡಿ, ಉಪಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಜೊತೆ ಕಾರ್ಯದರ್ಶಿ ಆಲಿಯಬ್ಬಾ ಪುಲಾಬೆ, ಪತ್ರಿಕಾ ಕಾರ್ಯದರ್ಶಿ ಇಲ್ಯಾಸ್ ಕರಾಯ, ಕೆ.ಎಸ್. ಅಬ್ದುಲ್ಲಾ, ಉಮರ್ ನಾಡ್ಜೆ, ಮಹಮ್ಮದ್ ಉಜಿರೆ, ಎಸ್.ಎಮ್.ಕೋಯ,ಕೆ. ಎಸ್.ಅಬೂಬಕ್ಕರ್, ಖಾಸಿಂ ಕಿಲ್ಲೂರು, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಮೀಯತುಲ್ ಫಲಾಹ್ ಸದಸ್ಯರಾದ ಕತಾರ್ ಹಾಜಿ ಮಹಮ್ಮದ್ ಕುಂಞ್ಞ ಯವರಿಗೆ ತಹಲೀಲ್ ಸಮರ್ಪಿಸಲಾಯಿತು.ಆಲಿಯಬ್ಬಾ ಪುಲಾಬೆ ಸ್ವಾಗತಿಸಿ,ಕೋಶಾಧಿಕಾರಿ ಇಬ್ರಾಹಿಂ ಮುಸ್ಲಿಯಾರ್ ವಂದಿಸಿದರು.
