


ಬೆಳ್ತಂಗಡಿ; ವಿದ್ಯಾರ್ಥಿಗಳು ಹಾಗೂ ಯುವಜನರು ರಕ್ತದಾನ ಮಾಡುವ ಮೂಲಕ ತಮ್ಮ ಜೀವನದಲ್ಲಿ ಇತರರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ತ್ಯಾಗ ಮನೋಭಾವನೆ ಬೆಳೆಸಿಕೊಳ್ಳಬೇಕು. ಮಹಾತ್ಮ ಗಾಂಧಿಯವರ ಜನ್ಮದಿನದಂದು ನಡೆಯುತ್ತಿರುವ ರಕ್ತದಾನ ಶಿಬಿರ ಅತ್ಯಂತ ಮಾದರಿ ಕಾರ್ಯಕ್ರಮ ಎಂದು ಮಾಲಾಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಧ್ಯಾಪಕಿ ಕುಸುಮಾವತಿ ಹೇಳಿದರು.
ಅವರು ಇಂದು ಮಾಲಾಡಿಯಲ್ಲಿ ಯುನೈಟೆಡ್ ಮಾಲಾಡಿ , ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ , B.M ಆಪೆ ರಿಕ್ಷಾ ಚಾಲಕ ಮಾಲಕರ ಸಂಘ ಮಡಂತ್ಯಾರು ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಮಾಲಾಡಿ ಎಸ್ ಕೆ ಹಾಲ್ ನಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರ , ಅಹಿಂಸೆಯ ಪ್ರತಿಪಾದಕ ಮಹಾತ್ಮ ಗಾಂಧಿಯವರ ಜನ್ಮದಿನದ ಗಾಂಧಿ ಜಯಂತಿ ಪ್ರಯುಕ್ತ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರಿದಾಸ್ ಎಸ್. ಎಂ ಮಾತನಾಡಿ ಜೀವನದಲ್ಲಿ ಸಮಸ್ಯೆಗಳು ಬಂದಾಗ ಕೈಹಿಡಿದು ನಡೆಸಲು ರೆಡ್ ಕ್ರಾಸ್ ಸೊಸೈಟಿಯು ಸಮಾಜದಲ್ಲಿ ಸಂಕಷ್ಟಕ್ಕೊಳಗಾದ ಜನರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಬಿ.ಪಿ ಎಲ್ ಕಾರ್ಡ್ ದಾರರಿಗೆ ಉಚಿತವಾಗಿ ರಕ್ತನೀಡುವ ಮೂಲಕ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರಿನಲ್ಲಿ ಉತ್ತಮ ಸೇವೆ ನೀಡುತ್ತಿದೆ ಎಂದರು. ಸಮಾಜದಲ್ಲಿ ವ್ಯರ್ಥವಾಗಿ ರಕ್ತ ಹರಿಸುವವರ ನಡುವೆ ಇನ್ನೊಂದು ಜೀವದ ಉಳಿವಿಗಾಗಿ ರಕ್ತದಾನ ಮಾಡುವುದು ಅತ್ಯಂತ ಶ್ರೇಷ್ಠದಾನ. ಮಹಾತ್ಮ ಗಾಂಧಿಯವರ ಜನ್ಮದಿನದಂದು ಇನ್ನೊಂದು ಜೀವದ ಉಳಿವಿಗಾಗಿ ನಡೆಸುವ ರಕ್ತದಾನ ಶಿಬಿರ ನಡೆಸುವ ಮೂಲಕ ಮಹಾತ್ಮ ಗಾಂಧಿಯವರ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುನೈಟೆಡ್ ಮಾಲಾಡಿ ಅದ್ಯಕ್ಷರಾದ ಮಹಮ್ಮದ್ ಅಲಿವಹಿಸಿದ್ದರು. ವೇದಿಕೆಯಲ್ಲಿ B.M ಚಾಲಕ ಮಾಲಕರ ಸಂಘ ಮಡಂತ್ಯಾರು ಅದ್ಯಕ್ಷರಾದ ನಾಸೀರ್ ಬಂಗೇರುಕಟ್ಟೆ, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್, ಸರ್ಕಾರಿ ಐಟಿಐ ಮಾಲಾಡಿ ಪ್ರಾಧ್ಯಾಪಕ ರವಿಚಂದ್ರ ಗೌಡ , ರೆಡ್ ಕ್ರಾಸ್ ಸೊಸೈಟಿಯ ಶ್ರೀಮತಿ ಮರಿಯಾ ಉಪಸ್ಥಿತರಿದ್ದರು .
ಯನೈಟೆಡ್ ಮಾಲಾಡಿ ಗೌರವಾಧ್ಯಕ್ಷ , ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯನ್ ಸ್ವಾಗತಿಸಿದರು. ರೆಡ್ ಕ್ರಾಸ್ ಸೊಸೈಟಿ ನಿರ್ದೇಶಕರಾದ ಶಿವಕುಮಾರ್ ಎಸ್. ಎಂ , ಸುಕನ್ಯಾ ಹೆಚ್ , ಹಿರಿಯರಾದ ಜೆರಾಲ್ಡ್ ಕೊರೆಯಾ , ನಿತ್ಯಾನಂದ ಹೆಗ್ಡೆ ,ಉದಯಚಂದ್ರ ವೀರೆಂದ್ರ ಕುಮಾರ್ , ವಿನ್ಸೆಂಟ್ ಡಿಸೋಜ ,ಯನೈಟೆಡ್ ಮಾಲಾಡಿಯ ಸದಸ್ಯರು ,ಬಿ.ಎಮ್ ಆಟೋ ಚಾಲಕ ಮಾಲಕ ಸಂಘದ ಸದಸ್ಯರು ಉಪಸ್ಥಿತರಿದ್ದು , ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
