ಬೆಳ್ತಂಗಡಿ; ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾನುವಾರ ಮಧ್ಯಾಹ್ನ ಗುಂಡ್ಯ ಸಮೀಪ ಬಸ್ ಗಳನಡುವೆ ಅಪಘಾತ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳೆರಡು ಮುಖಾಮುಖಿ ಡಿಕ್ಕಿಯಾಗಿ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ.
ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕೆಲವು ಗಂಟೆಗಳ ಕಾಲಅಸ್ತವ್ಯಸ್ತಗೊಂಡಿತ್ತು.
ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರಾಜಹಂಸ ಬಸ್ ಹಾಗೂ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬಸ್ ನಿರ್ವಾಹಕ ಹಾಸನದ ನಿಂಗರಾಜು (52) ಗಂಭೀರ ಗಾಯಗೊಂಡಿದ್ದಾರೆ. ಜೊತೆಗೆ ಪ್ರಯಾಣಿಕರಾದ ಪಡಂಗಡಿ ಮೂಲದ ಗಿರಿಜಾ (62), ಅವರ ಮಗಳು ಪ್ರಮೀಳ (38), ಮೊಮ್ಮಗ ಮನೀಷ್ ಧರ್ಮಸ್ಥಳದ ಪ್ರೇಮಲತಾ ಚನ್ನಪಟ್ಟಣದ ಪ್ರಭಾ (53), ಉತ್ತರ ಕರ್ನಾಟಕ ಮೂಲದ ನಂದೀಶ್ ಬೆಂಗಳೂರು ಮೂಲದ ಸಾವಿತ್ರಮ್ಮ (40), ಸಕಲೇಶಪುರದ ಅಚ್ಯುತ ಆಚಾರ್ಯ (56) ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಸಾಗಿಸಲಾಗಿದೆ.
