Home ಬ್ರೇಕಿಂಗ್‌ ನ್ಯೂಸ್ ಬೆಳ್ತಂಗಡಿ : ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರ ಡ್ರೈವಿಂಗ್ ಲೈಸನ್ಸ್ ಮೂಲಕ ಮತ್ತೊಬ್ಬನ ಗುರುತು ಪತ್ತೆ ಹಚ್ಚಿದ...

ಬೆಳ್ತಂಗಡಿ : ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರ ಡ್ರೈವಿಂಗ್ ಲೈಸನ್ಸ್ ಮೂಲಕ ಮತ್ತೊಬ್ಬನ ಗುರುತು ಪತ್ತೆ ಹಚ್ಚಿದ ಎಸ್.ಐ.ಟಿ

59
0

ಬೆಳ್ತಂಗಡಿ : ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸೆ‌.17 ಮತ್ತು 18 ರಂದು ಎಸ್.ಐ.ಟಿ ನಡೆಸಿದ ಕಾರ್ಯಾಚರಣೆ ವೇಳೆ ಪತ್ತೆಯಾದ ಏಳು ಅಸ್ಥಿಪಂಜರದಲ್ಲಿ ಒಂದು ಅಸ್ಥಿಪಂಜರದ ಗುರುತನ್ನು ಎರಡನೇ ದಿನದಲ್ಲಿ ಐಡಿ ಕಾರ್ಡ್ ಮೂಲಕ ಕುಟುಂಬ ಸದಸ್ಯರನ್ನು ಪತ್ತೆಹಚ್ಚಲಾಗಿತ್ತು. ಇದೀಗ ಮತ್ತೊಬ್ಬನ ಐಡಿ ಕಾರ್ಡ್ ಮೂಲಕ ಕುಟುಂಬ ಸದಸ್ಯರನ್ನು ಎಸ್.ಐ.ಟಿ ಪತ್ತೆ ಹಚ್ಚಿ ಕಚೇರಿಗೆ ಕರೆದು ಮಾಹಿತಿ ಕಲೆ ಹಾಕಿದೆ.

2-10-2013 ರಂದು ಬೆಂಗಳೂರು ಬಾರ್ ಕೆಲಸಕ್ಕೆ ಹೋಗುತ್ತಿದ್ದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ ಬೋಜಪ್ಪ ಮತ್ತು ಚೆನ್ನಮ್ಮ ಮೂರನೇ ಮಗ ಆದಿಶೇಷ ನಾರಾಯಣ(27) ಯುವಕ ಮನೆಗೆ ಬಂದು ಮೊಬೈಲ್ ಇಟ್ಟು ಮನೆಬಿಟ್ಟು ನಾಪತ್ತೆಯಾಗಿದ್ದ  ಅಸ್ಥಿಪಂಜರದ ಸಮೀಪ ಎಸ್.ಐ.ಟಿ ತಂಡಕ್ಕೆ ಡ್ರೈವಿಂಗ್ ಲೈಸೆನ್ಸ್ ಕಾರ್ಡ್ ಸಿಕ್ಕಿದ್ದು ಅದರ ಆಧಾರದ ಮೇಲೆ  ಆದಿಶೇಷನ ಅಕ್ಕಂದಿರಾದ ಲಕ್ಷ್ಮಿ, ಪದ್ಮ ಹಾಗೂ ಕುಟಬದ ಸದಸ್ಯರು ಸೆ.25 ರಂದು ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಬಂದು ಡ್ರೈವಿಂಗ್ ಲೈಸೆನ್ಸ್ ಅನ್ನು ಆತನದೆ ಆತ ತಮ್ಮ ತಮ್ಮನಾಗಿದ್ದ ಎಂದು ಗುರುತಿಸಿದ್ದಾರೆ.  ನಾಪತ್ತೆ ಬಗ್ಗೆ ಮಾಹಿತಿ‌ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಡಿ.ಎನ್.ಎ ಮಾಡಿಸುವುದಾಗಿಯೂ ಎಸ್.ಐ.ಟಿ ಅಧಿಕಾರಿಗಳು ಕುಟುಂಬಕ್ಕೆ  ಹೇಳಿ ಕಳುಹಿಸಿದ್ದಾರೆ.

ಆದಿಶೇಷ ನಾರಾಯಣ ಪದೆ ಪದೆ ಮನೆ ಬಿಟ್ಟು ಹೋಗಿ ವಾಪಸ್ ಬರುತ್ತಿದ್ದ ಕಾರಣದಿಂದ ನಾಪತ್ತೆಯಾಗಿರುವ ಬಗ್ಗೆ ಕುಟುಂಬ ಸದಸ್ಯರು ಯಾರು ಕೂಡ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಲ್ಲ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here