Home ಸ್ಥಳೀಯ ಸಮಾಚಾರ ಬೆಳ್ತಂಗಡಿ: ತಾಲೂಕಿನ ವಿವಿದೆಡೆ ಕಾಡಾನೆ ದಾಳಿ  ಕೃಷಿ ಹಾನಿ, ಹೆದ್ದಾರಿ ಬದಿಯಲ್ಲಿ ಒಂಟಿ ಸಲಗ

ಬೆಳ್ತಂಗಡಿ: ತಾಲೂಕಿನ ವಿವಿದೆಡೆ ಕಾಡಾನೆ ದಾಳಿ  ಕೃಷಿ ಹಾನಿ, ಹೆದ್ದಾರಿ ಬದಿಯಲ್ಲಿ ಒಂಟಿ ಸಲಗ

43
0

ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಅಟ್ಟಹಾಸ ನಿರಂತರವಾಗಿ ಹೆಚ್ಚಾಗಿದೆ. ಶಿಶಿಲ, ಧರ್ಮಸ್ಥಳ, ಪುದುವೆಟ್ಟು, ಚಿಬಿದ್ರೆ ಗ್ರಾಮದ ವಿವಿದೆಡೆ ಕೃಷಿಗೆ ವ್ಯಾಪಕವಾಗಿ ಹಾನಿಯುಂಟು ಮಾಡಿದೆ. ಪುದುವೆಟ್ಟು ಗ್ರಾಮದ ನಿವಾಸಿ ಯದುಪತಿ ಗೌಡ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿದೆ, ಚಿಬಿದ್ರೆ ಗ್ರಾಮದ ನಿವಾಸಿ ಸತೀಶ್ ರಾವ್, ಹಾಗೂ ಶ್ರೀಕಾಂತ ಅಚಾರ್ಯ ಎಂಬವರ ತೋಟಕ್ಕೆ ಕಾಡಾನೆಗಳ ಹಿಂಡು ನುಗ್ಗಿದ್ದು ವ್ಯಾಪಕ ಕೃಷಿಹಾನಿಯುಂಟುಮಾಡಿದೆ. ಅದೇರೀತಿ ಶಿಶಿಲ ಹಾಗೂ ಧರ್ಮಸ್ಥಳ ಗ್ರಾಮದಲ್ಲಿಯೂ ವಿವಿದೆಡೆ ಕಾಡಾನೆ ಹಾವಳಿ ಮುಂದು ವರಿದಿದೆ. ಮರಿಯಾನೆ ಸಹಿತ ಮೂರು ಆನೆಗಳ ಒಂದು ಆನೆಗುಂಪು ಹಾಗೂ ಎರಡು ಒಂಟಿ ಸಲಗವೊಂದು ಈ ಪರಿಸರದಲ್ಲಿ ಓಡಾಟ ನಡೆಸುತ್ತಿರುವುದಾಗಿ ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ಕಾಡಾನೆಗಳ ಹಾವಳಿ ಹೆಛಚಾಗುತ್ತಿದ್ದು ಕೃಷಿಕರು ಭಯದಲ್ಲಿ ಬದುಕಬೇಕಾದ ಸ್ಥಿತಿ ಎದುರಾಗಿದೆ.

ಹೆದ್ದಾರಿ ಬದಿಯಲ್ಲಿ ಒಂಟಿ ಸಲಗ;

ಮಂಗಳೂರು-ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯ ಸಮೀಪ ಮುಂಡಾಜೆಯ ಕಾಪು ಎಂಬಲ್ಲಿ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗವೊಂದು ಪ್ರತ್ಯಕ್ಷಗೊಂಡ ಘಟನೆ ಸೆ.22 ರಂದು ಮಧ್ಯಾಹ್ನ 3 ಗಂಟೆ ವೇಳೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ಸುಮೀಪದಲ್ಲಿ ಹರಿಯವ ನದಿಯಲ್ಲಿ ಆನೆ ಸಂಚಾರಿಸುವುದನ್ನು ಮೊಬೈಲ್‌ ನಲ್ಲಿ ಸೆರೆ ಹಿಡಿಯಲಾಗಿದೆ. ಹೆದ್ದಾರಿಗೆ ಸುಮಾರು 50 ಮೀ. ದೂರದಲ್ಲಿ ನೀರಾಟ ಆಡುತ್ತಿದ್ದ ಸಲಗವನ್ನು ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಗೆ ಅಟ್ಟಿದರು.

LEAVE A REPLY

Please enter your comment!
Please enter your name here