


ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಬಂಧಿಸಿದಂತೆ ನಡೆಯುತ್ತಿರುವ ಎಸ್.ಐ.ಟಿ ತನಿಖೆಯಲ್ಲಿ ಹೊಸ ಬೆಳವಣಿಗೆಗಗಳು ನಡೆದಿದ್ದು ತನಿಖೆ ಹೊಸ ದಿಕ್ಕಿನತ್ತ ಹೊರಳುತ್ತಿದೆ.
ಬಂಗ್ಲೆಗುಡ್ಡದಲ್ಲಿ ಹಲವಾರು ಮೃತದೇಹಗಳು ಪತ್ತೆಯಾಗಿರುವುದಾಗಿಯೂ ವಾಮಾಚಾರ ಮಾಡಲಾಗಿರುವಂತೆ ಕಂಡುಬರುತ್ತಿರುವುದಾಗಿ ವಿಠಲಗೌಡ ವೀಡಿಯೋ ಮಾಡಿ ಆರೋಪ ಮಾಡಿದ್ದ ತಾನು ಇಲ್ಲಿನ ಮೃತದೇಹಗಳನ್ನು ಎಸ್.ಐ.ಟಿ ಗೆ ತೋರಿಸಿರುವುದಾಗಿಯೂ ಹೇಳಿಕೆ ನೀಡಿದ್ದ. ಇದೀಗ ಇಲ್ಲಿ ನಡೆದಿರಬಹುದಾದ ವಾಮಾಚಾರಗಳ ವಿಚಾರದತ್ತ ಎಸ್.ಐ.ಟಿ ತಂಡ ಗಮನ ಹರಿಸುತ್ತಿರುವಿದಾಗಿ ತಿಳಿದು ಬಂದಿದೆ.
ಸ್ಥಳೀಯವಾಗಿ ವಾಮಚಾರ ಮಾಡುವವರ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಯತ್ನವನ್ನು ತಂಡ ನಡೆಸಿರುವವುದಾಗಿ ತಿಳಿದು ಬಂದಿದೆ.
ವಾಮಾಚಾರ ನಡೆದಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಒಟ್ಟಾರೆಯಾಗಿ ವಾಮಾಚಾರದ ಹಿನ್ನಲೆಯ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಲಾಗುತ್ತಿದೆ. ಎಸ್.ಐ.ಟಿ ತನಿಖೆ ದಿನಕಳೆದಂತೆ ಇನ್ನಷ್ಟು ವಿಸ್ತರಿಸಿಕೊಳ್ಳುತ್ತಾ ಸಾಗಿದೆ. ಇದರೊಂದಿಗೆ ಹಿಂದಿನ ಪ್ರಕರಣಗಳಾದ ಪದ್ಮಲತಾ ಕೊಲೆ ಪ್ರಕರಣ, ಆನೆ ಮಾವುತ ನಾರಾಯಣ ಹಾಗೂ ಆತನ ತಂಗಿ ಯಮುನಾ ಕೊಲೆ ಪ್ರಕರಣ ಸೇರಿದಂತೆ ಇನ್ನಷ್ಟು ದೂರುಗಳು ಎಸ್.ಐ.ಟಿ ಮುಂದೆ ಇದ್ದು ಇದರ ತನಿಖೆಯನ್ನೂ ತಂಡ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
