


ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಕಚೇರಿಗೆ ಯುಟ್ಯೂಬರ್ ಅಭಿಷೇಕ್ ವಿಚಾರಣೆಗಾಗಿ ಮತ್ತೆ ಸೆ.13ರಂದು ಮದ್ಯಾಹ್ನ ಹಾಜರಾಗಿದ್ದಾರೆ.
ಒಂದುವಾರಕ್ಕೂ ಹೆಚ್ಚು ಕಾಲ ವಿಚಾರಣೆ ಎದುರಿಸಿದ್ದ ಅಭಿಷೇಕ್ ಹೇಳಿಕೆಗಳನ್ನು ನೀಡಿ ಬಳಿಕ ವಿಚಾರಣೆಗೆ ಕರೆದಾಹ ಹಾಜರಾಗುವಂತೆ ಸೂಚಿಸಿ ಕಳುಹಿಸಲಾಗಿತ್ತು. ಇದೀಗ ಶನಿವಾರ ಈತನನ್ನು ಮತ್ತೆ ವಿಚಾರಣೆಗಾಗಿ ಎಸ್.ಐ.ಟಿ ತಂಡ ಕರೆಸಿಕೊಂಡಿದೆ. ಬಂಗ್ಲೆ ಗುಡ್ಡದಿಂದ ಬುರುಡೆ ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೆ ಪ್ರದೀಪ ನ್ಯಾಯಾಲಯದ ಮುಂದೆ ಹೇಳಿಕೆಯನ್ನು ನೀಡಿದ್ದಾನೆ ಇದಾದ ಬಳಿಕ ಇದೀಗ ವಿಠಲ ಗೌಡ ಹಾಗೂ ಅಭಿಷೇಕ್ ಅವರನ್ನು ಎಸ್.ಐ.ಟಿ ತಂಡ ವಿಚಾರಣೆಗಾಗಿ ಕರೆಸಿದ್ದಾರೆ.
