


ಬೆಳ್ತಂಗಡಿ :
ಧರ್ಮಸ್ಥಳದಲ್ಲಿ ಹಲವಾರು ಶವಗಳ ಕಾನೂನುಬಾಹಿರ ದಫನ ಪ್ರಕರಣದ ಎಸ್ ಐ ಟಿ ತನಿಖೆಯ ವರದಿ ಮಾಡುತ್ತಿದ್ದ
ಸಂದರ್ಭ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊೂಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ
ಯೂಟ್ಯೂಬರ್ ಗಳನ್ನು
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇದರ ಬೆಳ್ತಂಗಡಿ ತಾಲೂಕು ಪದಾಧಿಕಾರಿಗಳು ಮತ್ತು ಮೈಸೂರು ವಿಭಾಗೀಯ ಪದಾಧಿಕಾರಿಗಳ ನಿಯೋಗ
ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ತನಿಖೆಯ ಹಾದಿ ತಪ್ಪಿಸುವ ದುರುದ್ದೇಶದಿಂದ
ಸ್ಥಳೀಯ ಕೆಲವು ಗೂಂಡಾ ಪ್ರವೃತ್ತಿಯ ಕಿಡಿಗೇಡಿಗಳು
ಮಾಧ್ಯಮ ವರದಿಗಾರರಾಗಿ
ಬಂದಿರುವ ಯೂಟ್ಯೂಬ್ ಚಾನೆಲ್ ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾರೆ.
ವರದಿಗಾಗಿ ಬಂದಿರುವ ಯೂಟ್ಯೂಬರ್ ಗಳ ಮೇಲೆ ಹಲ್ಲೆ ಮಾಡುವ
ಪೂರ್ವ ಯೋಜಿತ ಕೃತ್ಯವಾಗಿದೆ ಎಂದಿರುವ
ದಲಿತ ಮುಖಂಡರು
ಸಂವಿಧಾನದ ನಾಲ್ಕನೇಯ ಅಂಗವೆಂದೇ ಕರೆಯಲ್ಪಡುವ
ಮಾಧ್ಯಮ ಪ್ರತಿನಿಧಿಗಳ ಮೇಲೆ ಸಮಾಜಘಾತುಕ ಶಕ್ತಿಗಳು ಹಲ್ಲೆ ಮಾಡಿರುವ ಘಟನೆಯನ್ನು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ನಿಯೋಗ ತೀವ್ರವಾದ ಖಂಡನೆ ವ್ಯಕ್ತಪಡಿಸಿದೆ. ಹಲ್ಲೆಗೆ ಒಳಗಾಗಿ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೂಟ್ಯೂಬರ್ಸ್ ಗಳನ್ನು
ಭೇಟಿ ಮಾಡಿ ಘಟನೆಯ ವಿವರಗಳನ್ನು ಪಡೆದು ಕೊಂಡು ಬೆಂಬಲ ಸೂಚಿಸಿದರು. ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಬಗ್ಗೆ ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಾಗುವುದು ಎಂದು ದಸಂಸ ನಾಯಕರು ತಿಳಿಸಿದರು.
ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿಯಾದ ದಲಿತ ಸಂಘರ್ಷ ಸಮಿತಿಯ ನಿಯೋಗದಲ್ಲಿ ಬೆಳ್ತಂಗಡಿಯ ಪ್ರಮುಖರಾದ
ಶೇಖರ್ ಕುಕ್ಕೇಡಿ,
ರಮೇಶ್ ಆರ್,
ಬಿ.ಕೆ.ವಸಂತ್ ಬೆಳ್ತಂಗಡಿ,
ವೆಂಕಣ್ಣ ಕೊಯ್ಯೂರು,
ನೇಮಿರಾಜ್ ಕಿಲ್ಲೂರು
ಶ್ರೀಧರ್ ಎಸ್ ಕಳೆಂಜ
ಶಂಕರ್ ಮಾಲಾಡಿ,
ಪ್ರಭಾಕರ್ ಶಾಂತಿಕೋಡಿ,
ಹರೀಶ್ ಲಾಯಿಲ
ಕೂಸ ಅಳದಂಗಡಿ
ಸುಂದರ ನಾಲ್ಕೂರು
ಪುಷ್ಪರಾಜ್ ಶಿರ್ಲಾಲ್.
ಸಂದೀಪ್ ಹೊಸಪಟ್ನ
ಶೇಖರ್ ಮಾಲಾಡಿ
ರಮೇಶ್ ಗಾಂಧಿನಗರ.
ಮತ್ತಿತರ ಪದಾದಿಕಾರಿಗಳು ಭಾಗವಹಿಸಿದ್ದರು.
