Home ಅಪರಾಧ ಲೋಕ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್ .ಬಿ. ನರೇಂದ್ರ ಕುಮಾರ್ ನಿಧನ

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್ .ಬಿ. ನರೇಂದ್ರ ಕುಮಾರ್ ನಿಧನ

0
3



ಉಜಿರೆ : ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್. ಬಿ. ನರೇಂದ್ರ ಕುಮಾರ್ (81) ಸೋಮವಾರ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಮಗಳು ಇದ್ದಾರೆ.
ಉತ್ತಮ ಕಬಡ್ಡಿ ಆಟಗಾರರೂ ಆಗಿದ್ದ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಚಿರಪರಿಚಿತರಾಗಿದ್ದರು.
ಧರ್ಮಸ್ಥಳದ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಕಾಲದಲ್ಲಿ ಅವರು ಶಿಸ್ತಿನ ಸಿಪಾಯಿಯಾಗಿ, ವಿದ್ಯಾರ್ಥಿ ನಿಲಯದ ವಾರ್ಡನ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ಆನಂದ ಶೆಟ್ಟಿಯಂತಹ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ರೂಪಿಸಿದ ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯನ್ನು ನೀಡಿ ಉದಯೋನ್ಮುಖ ಕಲಾವಿದರನ್ನು ರೂಪಿಸಿದ್ದಾರೆ.
ಅವರ ಅಂತ್ಯ ಸಂಸ್ಕಾರ ಇಂದು ಮಂಗಳವಾರ ಪೂರ್ವಾಹ್ನ 9 ಗಂಟೆಗೆ ಬೆಳ್ತಂಗಡಿ ಜೈನಪೇಟೆಯ ಬಸದಿ ಬಳಿ ಇರುವ ಚಿತಾಗಾರದಲ್ಲಿ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

NO COMMENTS

LEAVE A REPLY

Please enter your comment!
Please enter your name here