


ಬೆಳ್ತಂಗಡಿ: ಛತ್ತೀಸ್ ಗಡ್ ನಲ್ಲಿ ಕ್ರೈಸ್ತ ಧರ್ಮದ ಸನ್ಯಾಸಿನಿಯರನ್ನು ಅನ್ಯಾಯವಾಗಿ ಬಂಧಿಸಿರುವುದನ್ನು ವಿರೋಧಿಸಿ ಕ್ರೈಸ್ತರ ವಿರುದ್ದ ದೇಶದಾದ್ಯಂತ ನಡೆಯುತ್ತಿರುವ ದಾಳಿಗಳನ್ನು ಖಂಡಿಸಿ ಕಥೋಲಿಕ್ ಸಭಾ ಬೆಳ್ತಂಗಡಿ ವಲಯ ಹಾಗೂ ಕೆ.ಎಸ್.ಎಂ.ಸಿ ಎ ಬೆಳ್ತಂಗಡಿ, ಕ್ರೈಸ್ತ ಸಂಘಟನೆಗಳ ಒಕ್ಕೂಟ ಬೆಳ್ತಂಗಡಿ ಇದರ ನೇತೃತ್ವದಲ್ಲಿ ನ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆ 3 ಭಾನುವಾರ ನಡೆಸಲಾಗುವುದು ಎಂದು ಸಂಘಟನೆಯ ಮುಖಂಡರುಗಳು ತಿಳಿಸಿದ್ದಾರೆ.
ಆಗಸ್ಟ್ 3 ರಂದು ಸಂಜೆ 4ಗಂಟೆಗೆ ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ ನಿಂದ ಬೆಳ್ತಂಗಡಿ ಸಿ.ಎಸ್.ಐ ಚರ್ಚ್ ನ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಭಾಗ ವಹಿಸಲಿರುವುದಾಗಿ ಸಂಘಟನೆಗಳ ಮುಖಂಡರುಗಳು ತಿಳಿಸಿದ್ದಾರೆ.
