


ಬೆಳ್ತಂಗಡಿ: ನೇತ್ರಾವತಿ ಸ್ನಾನಘಟ್ಟದ ಸ್ಥಳದಲ್ಲಿ ಅನಾಮಿಕ ಗುರುತಿಸಿದ 5ನೇ ಸ್ಥಳ ಅಗೆಯುವ ಕಾರ್ಯಾಚರಣೆ ಕೊನೆಗೊಂಡಿದ್ದು ಯಾವುದೇ ಕಳೇಬರ ದೊರೆತಿಲ್ಲ.
ಎಸ್.ಐ.ಟಿ. ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ, ಅವರು ಸ್ಥಳಕ್ಕೆ ಭೇಟಿ ಮಾರ್ಗದರ್ಶನ ನೀಡಿದರು.
ತನಿಖಾಧಿಕಾರಿಗಳಾದ ಅನುಚೇತ್, ಎಸ್ಪಿ ಸಿ.ಎ.ಸೈಮನ್ ಜತೆಗಿದ್ದು ಕಾರ್ಯಾಚರಣೆ ಮುಗಿದ ಬಳಿಕ ಅನಾಮಿಕನನ್ನು ಎಸ್.ಐ.ಟಿ. ಕಚೇರಿಗೆ ಕರೆದೊಯ್ದಿದ್ದಾರೆ.
ಜು.31 ಕ್ಕೆ 6ನೇ ಕಳೇಬರಕ್ಕಾಗಿ ಶೋಧ ಕಾರ್ಯ ನಡೆಯಲಿದೆ.
ಈ ಮಧ್ಯೆ ಅನಾಮಿಕ ಪರ ನ್ಯಾಯವಾದಿ, ಮಂಜುನಾಥ್ ಎನ್. ಎಂಬವರು ಹೆಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಕಳೇಬರ ಶೋಧ ನಡೆಸುವಾಗ ಪ್ಯಾನ್ ಕಾರ್ಡ್, ಎಟಿಎಂ, ಕಾರ್ಡ್ ಸಿಕ್ಕಿದೆ ಎಂಬ ಹೇಳಿಕೆ ನೀಡಿದ್ದಾರೆ.
