


ಬೆಳ್ತಂಗಡಿ; ಧರ್ಮಸ್ಥಳ ನೇತ್ರಾವತಿ ಸ್ನಾನಘಟದ ಸಮೀಪ ಸಾಕ್ಷಿದೂರುದಾರ ಈಗಾಗಲೇ 13ಸ್ಥಳಗಳನ್ನು ಗುರುತಿಸಿ ಮಾರ್ಕ್ ಮಾಡಲಾಗಿದ್ದು ಇದೀಗ ಈ ಸ್ಥಳಗಳು ಸಂಪೂರ್ಣ ಪೊಲೀಸ್ ಕಣ್ಗಾವಲಿನಲ್ಲಿದೆ. ಇಲ್ಲಿಗೆ ಯಾರೂ ಪ್ರವೇಶ ಮಾಡದಂತೆ ಹಾಗೂ ಸ್ಥಳದ ಸಂರಕ್ಷಣೆಗಾಗಿ ಬಿಗುವಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ 13 ಸ್ಥಳದಲ್ಲಿ 30 ಜನ ಕಾರ್ಕಳದ ಎ.ಎನ್.ಎಫ್ ತಂಡದ ಸಿಬ್ಬಂದಿಗಳು ಕಾವಲು ಕಾಯುತ್ತಿದ್ದಾರೆ. ರಾತ್ರಿ ಹಾಗು ಹಗಲು ಇಲ್ಲಿ ಕಾವಲು ವ್ಯವಸ್ಥೆ ಮಾಡಲಾಗಿದ್ದು ಸ್ಥಳ ಅಗೆದು ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೆ ಈ ತಂಡ ಕಾವಲು ಮುಂದುವರಿಸಲಿದೆ.
