


ಬೆಳ್ತಂಗಡಿ : ಬೆಳ್ತಂಗಡಿ ಕೇಂದ್ರ ಖಿಲರ್ ಜುಮ್ಮಾ ಮಸೀದಿ ಇದರ ವಾರ್ಷಿಕ ಮಹಾಸಭೆಯು ಶುಕ್ರವಾರ ಜುಮ್ಮಾ ನಮಾಝಿನ ಬಳಿಕ ಖಿಲರ್ ಜುಮ್ಮಾ ಮಸೀದಿಯ ಮದರಸ ಹಾಲ್ ನಲ್ಲಿ ಜಮಾ’ಅತ್ ಖತೀಬರಾದ ಹನೀಫ್ ಫೈಝಿಯವರು ದುವಾ ಮೂಲಕ ನಡೆಯಿತು. ಪ್ರಧಾನ ಕಾರ್ಯದರ್ಶಿ ರಝಾಕ್ ಕೊಡಿಸಭೆಯವರು ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಅಧ್ಯಕ್ಷರಾದ ಬಿ ಎ ನಝೀರ್ ರವರು ಕಳೆದ ಸಾಲಿನ ಅವಧಿಯಲ್ಲಿ ನಡೆದ ಮಸೀದಿಯ ಅಭಿವೃದ್ಧಿ ಕಾರ್ಯವನ್ನು ವಿವರಿಸಿದರು. ಮಹಮ್ಮದ್ ಬಿ ಎಚ್ ಗೌರವ ಅಧ್ಯಕ್ಷತೆಯಲ್ಲಿ ಹಳೆಯ ಸಮಿತಿಯನ್ನು ಬರ್ಕಾಸುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಕೊಡಿಸಭೆ, ಉಪಾಧ್ಯಕ್ಷರಾಗಿ ಬಿ.ಶೇಕುಂಞ, ಬದ್ರುದ್ದಿನ್ ಮಟ್ಲ, ಜೊತೆ ಕಾರ್ಯದರ್ಶಿಗಳಾಗಿ ಹನೀಫ್ ವರ್ಷಾ, ಮಹಮ್ಮದ್ ಕುದ್ರಡ್ಕ, ಕೋಶಾಧಿಕಾರಿಯಾಗಿ ಫೈಝಲ್ ಐ.ಜೆ ಆಯ್ಕೆಯಾದರು.

ಸಮಿತಿಯ ಗೌರವ ಅಧ್ಯಕ್ಷರಾಗಿ ಬಿ ಎಚ್ ಮಹಮ್ಮದ್, ಗೌರವ ಸಲಹೆಗಾರರಾಗಿ ನಝೀರ್ ಬಿ. ಎ ರವರು ಆಯ್ಕೆಯಾದರು . ಈ ಸಂದರ್ಭದಲ್ಲಿ ಜಮಾತ್ ಬಾಂಧವರು ಉಪಸ್ಥಿತರಿದ್ದರು.
ಸಭೆಯನ್ನು ಕಾರ್ಯದರ್ಶಿ ರಝಾಕ್ ಕೊಡಿಸಭೆ ಸ್ವಾಗತಿಸಿ, ಯಾಕೂಬ್ ಮಾಸ್ಟರ್ ನಿರೂಪಿಸಿದರು.
