Home ಅಪರಾಧ ಲೋಕ ಬೆಳ್ತಂಗಡಿ;  ರಾಜಕೇಸರಿ ಟ್ರಸ್ಟ್ ವತಿಯಿಂದ ಬಸ್ ನಿಲ್ದಾಣ ದಲ್ಲಿ ಆಟಿದ ಕಷಾಯ ಮತ್ತು ಗಂಜಿ ವಿತರಣೆ

ಬೆಳ್ತಂಗಡಿ;  ರಾಜಕೇಸರಿ ಟ್ರಸ್ಟ್ ವತಿಯಿಂದ ಬಸ್ ನಿಲ್ದಾಣ ದಲ್ಲಿ ಆಟಿದ ಕಷಾಯ ಮತ್ತು ಗಂಜಿ ವಿತರಣೆ

19
0

ಬೆಳ್ತಂಗಡಿ;  ರಾಜ ಕೇಸರಿ ಟ್ರಸ್ಟ್ ರಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ನಡೆದ ರಾಜ ಕೇಸರಿ ಸಂಘಟನೆ ಸಂಸ್ಥಾಪಕರ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 566 ಸೇವಾ ಯೋಜನೆಯ ಮೂಲಕ ನಡೆದಂತಹ ಬೆಳ್ತಂಗಡಿ ಬಸ್ ಸ್ಟ್ಯಾಂಡಿನಲ್ಲಿ ಆಟಿದ ಕಷಾಯ ಮತ್ತು ಮೆತ್ತೆಗಂಜಿ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ ಕೇಸರಿ ಟ್ರಸ್ಟ್ ರಿ ಇದರ ಜಿಲ್ಲಾಧ್ಯಕ್ಷರಾದ ಸಂತೋಷ್ ಕೂಲ್ಯ ನೆರೆವೇರಿಸಿ ಶುಭ ಹಾರೈಸಿದರು
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ  ಕಿರಣ್ ಚಂದ್ರ ಡಿ ಪುಷ್ಪಗಿರಿ ಇವರು ಮಾತನಾಡಿ ಸದಾ ಜನರಿಂದ ಜನರಿಗೋಸ್ಕರ ಸೇವೆಯನ್ನು ಮಾಡುತ್ತಿರುವ ಬೆಳ್ತಂಗಡಿ ತಾಲೂಕಿನಲ್ಲಿ ಏಕೈಕ ಒಂದು ಸಂಘಟನೆ ಅಂದರೆ ದೀಪಕ್ ಜಿ ಬೆಳ್ತಂಗಡಿಯವರ ಮುನ್ನಡೆಸುತ್ತಿರುವಂತಹ ರಾಜ ಕೇಸರಿ ಎಂದು ಈ ಕಾಲದಲ್ಲಿ ಇಂತಹ ಕಾರ್ಯಕ್ರಮಗಳು ನಶಿಸಿ ಹೋಗುತ್ತಿದೆ ಇದನ್ನು ಉಳಿಸುವ ನಿಟ್ಟಿನಲ್ಲಿ ಇವತ್ತು ಬೆಳಿಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆ ತನಕ ಸರಿಸುಮಾರು 500 ಕ್ಕಿಂತ ಅಧಿಕವಾಗಿ ಇದರ ಸಾರ್ವಜನಿಕರು ಸದುಪಯೋಗಪಡಿಸಿಕೊಂಡಿದ್ದಾರೆ ಇದು ಬಹಳ ಒಂದು ಖುಷಿಯ ವಿಷಯ ಎಂದು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರರಾದ ಪೃಥ್ವಿ ಸಾನಿಕಂ..
ಬೆಳ್ತಂಗಡಿ ಪೊಲೀಸ್ ಠಾಣೆಯ ವೃತ ನಿರೀಕ್ಷಕರಾದ ನಾಗೇಶ್ ಕದ್ರಿ,

ಬೆಳ್ತಂಗಡಿ ತಾಲೂಕು ಪತ್ರಕರ್ತರ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಏಣಿಂಜೆ.ವಿಜಯವಾಣಿ ವರದಿಗಾರರಾದ ಮನೋಹರ್ ಬಾಳಂಜ,ಸರ್ವಧರ್ಮದ ಗುರುಗಳು.ಹಾಗೂ ಧಾರ್ಮಿಕ ಮುಖಂಡರಗಳು ಆಗಮಿಸಿ ಶುಭ ಹಾರೈಸಿದರು. ಸಂಘ ಸಂಸ್ಥೆಯವರು. ಕೆ ಎಸ್ ಆರ್ ಟಿ ಸಿ ಬಸ್ ಚಾಲಕರು ಹಾಗೂ ನಿರ್ವಾಹಕರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ
ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ.
ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಸತೀಶ್ ಕಂಗಿತ್ತಿಲ್
ಹಾಗೂ ರಾಜ ಕೇಸರಿ ಸಂಘಟನೆಯ ಪದಾಧಿಕಾರಿಗಳಾದ
ಪ್ರೇಮ್ ರಾಜ್ ರೋಷನ್ ಸ್ರಿಕ್ಕೇರಾ.
ಪ್ರಶಾಂತ್ ಗುರುವಾಯನಕೆರೆ.
ಸಂಪತ್. ಜಗದೀಶ್. ವಿನೋದ್ ಲೈಲಾ .ಸಂದೇಶ್. ಗಣೇಶ್ ‌. ಕಿಶನ್. ದೇವರಾಜ್. ರಾಜ ಕೇಸರಿ ಜಿಲ್ಲಾ ಪದಾಧಿಕಾರಿಗಳಾದ . ಲೋಕೇಶ್ ಮಂಗಳದೇವಿ.. ವರುಣ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here