

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡದಲ್ಲಿ ಹೊಸದಾಗಿ 20ಸದಸ್ಯರುಗಳನ್ನು ಸೇರಿಸಿ ತನಿಖಾ ತಂಡವನ್ನು ವಿಸ್ತರಣೆ ಮಾಡಲಾಗಿದ್ದು ಇಂದಿನಿಂದಲೇ ತನಿಖಾ ಪ್ರಕ್ರಿಯೆ ಆರಂಭವಾಗಲಿದ್ದು ಒಂದೆರಡು ದಿನಗಳಲ್ಲಿ ತಂಡ ಧರ್ಮಸ್ಥಳ ಕ್ಕೆ ಆಗಮಿಸಿ ತನಿಖಾ ಕಾರ್ಯ ಆರಂಭಿಸಲಿರುವುದಾಗಿ ತಿಳಿದು ಬಂದಿದೆ
ಧರ್ಮಸ್ಥಳದಲ್ಲಿ ಹಲವಾರು ಹೆಣಗಳನ್ನು ಹೂತಿರುವುದಾಗಿ ಸ್ವಚ್ಚತಾ ಕಾರ್ಮಿಕನೊಬ್ಬ ಹೇಳಿಕೆ ನೀಡಿದ್ದಲ್ಲದೆ ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ನೀಡಿದ್ದ. ಇದರ ಬೆನ್ನಲ್ಲಿಯೇ ವಿಶೇಷ ತನಿಖಾ ತಂಡ ರಚಿಸುವಂತೆ ರಾಜ್ಯದಾದ್ಯಂತ ಒತ್ತಾಯಗಳು ಕೇಳಿ ಬಂದಿತ್ತು ಈ ಹಿನ್ನಲೆಯಲ್ಲಿ ಜು19ರಂದು ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಕುಮಾರ್ ಮೊಹಂತಿ ನೇತೃತ್ವದಲ್ಲಿ ಎಂಎಸ್. ಅನುಚೇತ್ ಐಪಿಎಸ್, ಶ್ರೀಮತಿ ಸೌಮ್ಯಲತಾ ಐಪಿಎಸ್, ಜಿತೇಂದ್ರ ಕುಮಾರ್ ದಯಾಮ ಐಪಿಎಸ್ ಅವರನ್ನು ಒಳಗೊಂಡ
ಎಸ್.ಐ.ಟಿ ತಂಡವನ್ನು ರಚಿಸಲಾಗಿತ್ತು.
ಇದೀಗ ಎಸ್.ಐ.ಟಿ ತಂಡಕ್ಕೆ ಇತರೆ 20 ಮಂದಿ ಅಧಿಕಾರಿಗಳನ್ನು ಸೇರಿಸಿ ವಿಸ್ತರಿಸಲಾಗಿದೆ
ಸಿ.ಎ.ಸೈಮನ್ ಎಸ್ಪಿ, ಡಿಸಿಆರ್ ಇ , ಮಂಗಳೂರು, ಲೋಕೇಶ್ ಎ.ಸಿಡಿಎಸ್ಪಿ ಸಿಇಎನ್ ಪಿಎಸ್, ಉಡುಪಿ, ಮಂಜುನಾಥ್- ಡಿಎಸ್ಪಿ ಸಿಇಎನ್ ಪಿಎಸ್, ಡಿಕೆ, ಮಂಜುನಾಥ್- ಪಿಐ, ಸಿಎಸ್ಪಿ, ಸಂಪತ್ ಇ.ಸಿ-ಪಿಐ, ಸಿಎಸ್ಪಿ, ಕುಸುಮಾಧರ್ ಕೆ- ಪಿಐ, ಸಿಎಸ್ಪಿ, ಮಂಜುನಾಥ್ ಗೌಡ-ಪಿಐ ಶಿರಸಿ ಗ್ರಾಮಾಂತರ, ಉತ್ತರ ಕನ್ನಡ, ಸಾವಿತ್ರು ತೇಜ್ ಪಿ.ಡಿ- ಸಿಪಿಐ, ಬೈಂದೂರು, ಉಡುಪಿ, ಕೋಕಿಲಾ ನಾಯಕ್- ಪಿಎಸ್ಐ, ಸಿಎಸ್ಪಿ, ವಾಯ್ಲೆಟ್ ಫೆಮಿನಾ- ಪಿಎಸ್ಐ, ಸಿಎಸ್ಪಿ, ಶಿವಶಂಕರ್- ಪಿಎಸ್ಐ, ಸಿಎಸ್ಪಿ,ರಾಜ್ ಕುಮಾರ್ ಉಕ್ಕಲಿ- ಪಿಎಸ್‌ಐ ಸಿರ್ಸಿ ಎನ್‌ಎಂ ಪಿಎಸ್, ಉತ್ತರ ಕನ್ನಡ, ಸುಹಾಸ್ ಆರ್-ಪಿಎಸ್ಐ, ತನಿಖೆ, ಅಂಕೋಲಾ ಪಿ.ಎಸ್., ಉತ್ತರ ಕನ್ನಡ ,ವಿನೋದ್ ಎಸ್.ಕಲ್ಲಪ್ಪನವರ್- ಪಿಎಸ್ಐ, ತನಿಖೆ, ಮುಂಡಗೋಡ ಪಿಎಸ್, ಉತ್ತರ ಕನ್ನಡ ,ಗುಣಪಾಲ್ ಜೆ- ಪಿಎಸ್ ಐ, ಮೆಸ್ಕಾಂ, ಮಂಗಳೂರು,ಸುಭಾಷ್ ಕಾಮತ್-ಎಎಸ್ಐ, ಉಡುಪಿ ಟೌನ್ ಪಿಎಸ್, ಹರೀಶ್ ಬಾಬು- ಸಿಎಚ್ ಸಿ 91, ಕಾಪು ಪಿಎಸ್ ಉಡುಪಿ,ಪ್ರಕಾಶ್- ಸಿಎಚ್‌ಸಿ 1140, ಮಲ್ಪೆ ವೃತ್ತ ಕಚೇರಿ, ಉಡುಪಿ,ನಾಗರಾಜ್-ಸಿಎಚ್‌ಸಿ 1177, ಕುಂದಾಪುರ ಟೌನ್ ಪಿಎಸ್, ಉಡುಪಿ ,ದೇವರಾಜ್- ಸಿಎಚ್‌ಸಿ 359, ಎಫ್‌ಎಂಎಸ್, ಚಿಕ್ಕಮಗಳೂರು ಇವರನ್ನು ತನಿಖಾ ತಂಡಕ್ಕೆ ಸೇರಿಸಲಾಗಿದೆ.
