Home ಸ್ಥಳೀಯ ಸಮಾಚಾರ ಕಳೆಂಜದಲ್ಲಿ ಜನಸ್ಪಂದನ ಸಭೆ ಕಾಡುಪ್ರಾಣಿಗಳಿದ ಕೃಷಿ ನಾಶ; ಕೃಷಿಕರ ಪರವಾಗಿ ಸದಾ ಇದ್ದೇನೆ ಶಾಸಕ ಹರೀಶ್...

ಕಳೆಂಜದಲ್ಲಿ ಜನಸ್ಪಂದನ ಸಭೆ ಕಾಡುಪ್ರಾಣಿಗಳಿದ ಕೃಷಿ ನಾಶ; ಕೃಷಿಕರ ಪರವಾಗಿ ಸದಾ ಇದ್ದೇನೆ ಶಾಸಕ ಹರೀಶ್ ಪೂಂಜ

0
10

ಬೆಳ್ತಂಗಡಿ : ಕಾಡು ಪ್ರಾಣಿಗಳಿಂದಗಿ ಕೃಷಿಕರು ನೆಮ್ಮದಿಯ ಬದುಕನ್ನುನಡೆಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹೇರಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಳ್ತಂಗಡಿ, ಕಡಬ ಹಾಗೂ ಸುಳ್ಯ‌ತಾಲೂಕಿನ ಮುಖಂಡರ ಹಾಗೂ ಜಪ್ರತಿನಿಧಿಗಳ ಸಭೆಯನ್ನು ಕರೆದು ಚರ್ಚಿಸಲಾಗುವುದು. ಕೇರಳ ಮಾದರಿಯಲ್ಲಿ ಕೃಷಿ ಹಾನಿಮಾಡುವ ಕಾಡು ಹಂದಿಗಳನ್ನು ಹೊಡೆಯಲು ಅನುಮತಿ ನೀಡುವಂತೆ ಈಗಾಗಲೇ ಅರಣ್ಯ ಸಚಿವರಿಗೆ ಮಮವಿ ಮಾಡಲಾಗಿದೆ ಇದಕ್ಕೆ ಸರಕಾರ ಕೃಷಿಕರಿಗೆ ಅನುಮತಿ ನೀಡಬೇಕು ಕಾಡುಪ್ರಾಣಿಗಳಿಂದ ಸಮಸ್ಯೆ ಎದುರಿಸುತ್ತಿರುವ ಕೃಷಿಕರ ಪರವಾಗಿ ನಿರಂತರ ಧ್ವನಿಯೆತ್ತಲಾಗುವುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಳೆಂಜ ಗ್ರಾಮಪಂಚಾಯತ್ ವ್ಯಾಪ್ತಿಯ ಜನಸ್ಪಂದನಾ ಸಭೆಯು ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ
ಮಂಗಳವಾರ ನಡೆಯಿತು.
ಸಭೆಯಲ್ಲಿ ಕಾಡುಪ್ರಾಣಿಗಳಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ ಶಾಸಕರು ಈ ವಿಚಾರ ತಿಳಿಸಿದರು.
ಗ್ರಾಮಸ್ಥರಿಗೆ ಯಾವುದೇ ಸರಕಾರಿ ಸಭೆ,ಸಮಾರಂಭಗಳನ್ನು ಆಯೋಜಿಸಲು ಸೂಕ್ತ ಸಭಾಭವನ ವ್ಯವಸ್ಥೆ ಇಲ್ಲದ ಕಾರಣ ಈ ಬಗ್ಗೆ ಅಂಬೇಡ್ಕರ್ ಭವನ ಅಥವಾ ಯಾವುದೇ ರೀತಿಯ ಕಟ್ಟಡವನ್ನು ನಿರ್ಮಿಸುವ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ
ಸ್ಪಂದಿಸಿದ ಶಾಸಕ ಹರೀಶ್ ಪೂಂಜ ಅವರು ಕಂದಾಯ ಇಲಾಖಾ ಗ್ರಾಮಾಡಳಿತ ಅಧಿಕಾರಿಯನ್ನು ವಿಚಾರಿಸಿದ್ದು 10 ಸೆಂಟ್ಸ್ ಜಾಗ ಕಾದಿರಿಸಿದ ಬಗ್ಗೆ ಮಾಹಿತಿ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಹರೀಶ್ ಪೂಂಜ 10.ಸೆಂಟ್ಸ್ ಜಾಗ ಸಾಕಾಗುವುದಿಲ್ಲ; ಅರ್ಧ ಎಕ್ರೆ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಕಾದಿರಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಈ ಸಂದರ್ಭ ಕಾಯರ್ತಡ್ಕ ರಸ್ತೆ ತೀವ್ರ ಹದಗೆಟ್ಟಿದ್ದು ಇದರ ದುರಸ್ತಿ ಬಗ್ಗೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರೊಬ್ಬರು ಮನವಿ ಮಾಡಿಕೊಂಡರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 8 ಕೋಟಿ ರೂ. ಅನುದಾನದಲ್ಲಿ 4 ಕೋಟಿ ರೂಪಾಯಿ ಹಣವನ್ನು ಕಾಯರ್ತಡ್ಕ ರಸ್ತೆಯ ಅಭಿವೃದ್ಧಿಗಾಗಿ ಇಡಲಾಗಿದೆ. ರಾಜಕಮಲ್ ನವರಿಗೆ ಕಾಮಗಾರಿಗೆ ಟೆಂಡರ್ ಕೂಡ ಆಗಿದೆ, ಕಾಮಗಾರಿ ಪ್ರಾರಂಭವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗ್ರಾಮಸ್ಥ ಪದ್ಮನಾಭ ಎಂಬವರು ಸ್ಥಳೀಯ ಸರಕಾರಿ ಶಾಲೆಯ ಮೇಲ್ಛಾವಣಿ ಶಿಥಿಲಗೊಂಡಿದೆ, ಮಳೆಗಾಲದಲ್ಲಿ ಶಾಲಾ ಮಕ್ಕಳ ಶಾಲೆಗೆ ಕಳಿಸುವ ಬಗ್ಗೆ ಆತಂಕವಾಗುತ್ತಿದೆ ಮತ್ತು ಶಾಲೆಯ ಜಾಗಕ್ಕೆ ಪಹಣಿ ಸಮಸ್ಯೆಯೂ ಇದೆ
ಎಂದರು.
ಈ ಬಗ್ಗೆ ಗ್ರಾಮಪಂಚಾಯತ್ ಆಡಳಿತ ವತಿಯಿಂದ ಕೂಡಲೇ ದುರಸ್ತಿಗೊಳಿಸಲು
ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ
ಶಾಸಕ ಹರೀಶ್ ಸೂಚಿಸಿದರು.

ಕಳೆದ ವರ್ಷ ಕಳೆಂಜ ಗ್ರಾಮದ
ಅರಣ್ಯದಂಚಿನ 8 ಸಾವಿರ ಎಕ್ರೆ ವಿಸ್ತೀರ್ಣದ 309 ಸ.ನಂ. ದಲ್ಲಿ ಉಂಟಾದ ವಿವಾದ ಹಾಗೂ
ಲೋಲಾಕ್ಷ ಎಂಬವರ ಮನೆ ನಿರ್ಮಾಣದ ಸಂದರ್ಭ ಉಂಟಾದ ಖಾಸಗಿ-ಅರಣ್ಯ ಇಲಾಖೆಯ ಮಧ್ಯೆ ಉಂಟಾದ ಸಮಸ್ಯೆ,ವಿವಾದ,
ಜಂಟಿ ಸರ್ವೆ ಗೊಂದಲ ಮತ್ತಿತರ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ ಗ್ರಾಮಸ್ಥರು ಸಮಸ್ಯೆ ಬಗೆಹರಿಸಬೇಕೆಂದು
ಗ್ರಾಮಸ್ಥರು ಒತ್ತಾಯಿಸಿದರು.
ಈ ಬಗ್ಗೆ ಶಾಸಕರು ಸರಕಾರ ಮತ್ತು ಇಲಾಖಾ ಮಟ್ಟದಲ್ಲಿ ನಡೆದ ಹಂತ ಹಂತದ ಬೆಳವಣಿಗೆಗಳನ್ನು ವಿವರಿಸುವ ಮೂಲಕ ಸುದೀರ್ಘ ಮಾಹಿತಿ ನೀಡಿದರು. ಮಳೆಗಾಲ ಮುಗಿದ ಕೂಡಲೇ ಇ ಜಮೀನಿನ ಜಂಟಿ ಸರ್ವೆಕಾರ್ಯ ನಡೆಸಲಾಗುವುದು. ಇಲ್ಲಿ ಹೆಚ್ಚುವರಿ ಜಮೀನು ಇದೆ ಎಂಬುದು ಸ್ಪಷ್ಟವಾಗಿದ್ದು ಅಳತೆಕಾರ್ಯ ಪೂರ್ಣಗೊಂಡ ಬಳಿಕ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಾಗುತ್ತದೆ ಎಂದರು.
ಉಳಿದಂತೆ ಜನಸ್ಪಂದನ ಸಭೆಯಲ್ಲಿ ಅಕ್ರಮ -ಸಕ್ರಮ, ಪ್ಲಾಟಿಂಗ್ ಸಮಸ್ಯೆ, ಪಶುಸಂಗೋಪಣಾ ಇಲಾಖಾ ಸಿಬ್ಬಂದಿಗಳ ಕೊರತೆ ಬಸ್ ಗಳ ಕೊರತೆ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ತಹಶಿಲ್ದಾರ್ ಪೃಥ್ವಿ ಸಾನಿಕಮ್ ಗ್ರಾ.ಪಂ ಅಧ್ಯಕ್ಷರು ಉಪಾದ್ಯಕ್ಷರು ಸದಸ್ಯರುಗಳು ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಳೆಂಜ ಗ್ರಾಮಕ್ಕೆ ಮಂಜೂರಗಿರುವ ಸ್ಮಶಾನಕ್ಕೆ ಕೆಲವರು ಅಡಚಣೆ ತರುತ್ತಿರುವ ಬಗ್ಗೆ ಚರ್ಚೆ ನಡೆಯಿತು. ಈ ಬಗ್ಗೆ ಉತ್ತರಿಸಿದ ತಹಶಿಲ್ದಾರರು. ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸುವುದಕ್ಕೆ ಯಾವುದೇ ಅಡಚಣೆಯಿಲ್ಲ. ಕಮಗಾರಿಗಳನ್ನು ನಡೆಸಲು ನ್ಯಾಯಾಲಯದ ತಡಯಿದೆ. ಎಂದರು
ಸ್ಮಶಾನಕ್ಕೆ ಮೀಸಲಿರಿಸಿದ ಜಾಗವನ್ನು ಸರ್ವೆ ನಡೆಸಿ ಕೂಡಲೇ ಗಡಿಗುರುತು ಮಾಡುವಂತೆ ಶಾಸಕರು ಸೂಚಿಸಿದರು.

NO COMMENTS

LEAVE A REPLY

Please enter your comment!
Please enter your name here